Gandhadagudi : ‘ಗಂಧದ ಗುಡಿ’ ಟಿಕೆಟ್ ದರ ಇಳಿಕೆ – ಸಿಹಿ ಸುದ್ದಿ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್….
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕರ್ನಾಟಕದ ವನ್ಯ ಸಂಪತ್ತನ್ನ ಅದ್ಭುತವಾಗಿ ಸೆರೆಹಿಡಿದು ಕನ್ನಡಿಗರಿಗೆ ತೋರಿಸಿರುವ ಈ ಪ್ರಯತ್ನವನ್ನ ಅನೇಕ ಸ್ಟಾರ್ ಗಳು ಮೆಚ್ಚಿಕೊಂಡಿದ್ದಾರೆ.
ಇಂಥಹ ಚಿತ್ರವನ್ನ ರಾಜ್ಯಾದ್ಯಂತ ಪ್ರತಿಯೊಬ್ಬರೂ ಸಿನಿಮಾ ವೀಕ್ಷಣೆ ಮಾಡಲಿ ಹಾಗೂ ಪರಿಸರ ಜಾಗೃತಿ ಅಳವಡಿಸಿಕೊಳ್ಳಲಿ ಅನ್ನೋ ಕಾರಣಕ್ಕೆ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ ನೀಡಿಲಾಗಿದೆ. ಈ ಕುರಿತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪ್ರಕಟಣೆಯನ್ನೇ ಹೊರಡಿಸಿದ್ದಾರೆ.
“ಗಂಧದಗುಡಿ ಅಪ್ಪು ರವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು, ಅದರಲ್ಲೂ ಮಕ್ಕಳು ನೋಡಬೇಕು ಎಂಬುದಾಗಿದೆ. ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ `ಗಂಧದಗುಡಿ’ಯನ್ನು ನವೆಂಬರ್ 7 ರಿಂದ 10ರ ವರೆಗೆ ಸಿಂಗಲ್ ಸ್ಕ್ರೀನ್ ಥೀಯೇಟರ್ ಗಳಲ್ಲಿ 756 ರೂ.ಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂ.ಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ಯನ್ನು ತೋರಿಸೋಣ” ಎಂದು ಕರೆ ಕೊಟ್ಟಿದ್ದಾರೆ.
Gandhadagudi ticket price reduced – Ashwini Puneeth Rajkumar








