ಮಹಾತ್ಮ ಗಾಂಧಿಜೀ ನಿಮಗೆ ಟ್ರೈಲರ್ ಆಗಿರಬಹುದು, ಆದರೆ ನಮಗೆ ಜೀವನ ಎಂದು ವಿಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ನಂiÀiವಾಗಿ ತಿರುಗೇಟು ನೀಡಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ಅವರ, ಗಾಂಧಿ ಬಗೆಗಿನ ಹೇಳಿಕೆ ಖಂಡಿಸಿ ಸಂಸAತ್ನಲ್ಲಿ ವಿಪಕ್ಷಗಳು ಬಾರೀ ಗದ್ದಲ ಎಬ್ಬಿಸಿದ್ವು. ಈ ವೇಳೆ ರಾಷ್ಟ್ರಪತಿಗಳ ವಂದನಾ ನಿರ್ಣ ಯ ಭಾಷಣ ಮಂಡಿಸಲು ಅಣಿಯಾದ ಪ್ರಧಾನಿ ಮೋದಿ, ಇಷ್ಟೆನಾ, ಇನ್ನೂ ಇದಿಯಾ ಎಂದು ವಿಪಕ್ಷಗಳ ಕಾಲೆಳೆದರು. ಈ ವೇಳೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮಾತಿಗೆ ತಿರುಗೇಟು ನೀಡಿದ ಪ್ರಧಾನಿ, ನಿಮಗೆ ಗಾಂಧಿ ಟ್ರೈಲರ್ ಆಗಿರಬಹುದು, ಆದರೆ ನಮಗೆ ಅವರು ನಮ್ಮ ಜೀವ ಎಂದು ವಿಪಕ್ಷದವರ ಮಾತಿಗೆ ಬೀಗ ಹಾಕಿದ್ರು.
ಇನ್ನ, ಕಲಾಪದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ ಪ್ರಧಾನಿ, ಹಿಂದಿನವರ ರೀತಿಯಲ್ಲೇ ಆಲೋಚನೆ ಮಾಡಿಕೊಂಡು ಕೆಲಸ ಮುಂದುವರಿಸಿದ್ದರೆ, ರಾಮ ಜನ್ಮ ಭೂಮಿ ವಿವಾದ, ಕರ್ತಾರ್ ಪುರ ಕಾರಿಡಾರ್ ಯೋಜನೆ, ಸಂವಿಧಾನ ವಿಧಿ ೩೭೦ ರದ್ದು ಹಾಗೂ ತ್ರಿವಳಿ ತಲಾಖ್ ನಂತಹ ಇಸ್ಲಾಂ ಮಹಿಳಾ ವಿರೋಧಿ ಆಚರಣೆಗಳು ಹಾಗೂ ಅತ್ಯಾಚಾರವೆಸಗಿದ ಬಾಲಾಪರಾಧಿಗಳಿಗೆ ಶಿಕ್ಷೆಯಾಗುತ್ತಿರಲಿಲ್ಲ ವ್ಯಂಗ್ಯವಾಡಿದ್ರು.
ಇದೇ ವೇಳೆ ಸದನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಪ್ರಧಾನಿ ನರೇಂದ್ರ ಮೋದಿ ಟ್ಯೂಬ್ ಲೈಟ್ ಎಂದು ಜರಿದ ಪ್ರಸಂಗವೂ ನಡೆಯಿತು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ದೇಶದ ಯುವಜನತೆ ಇನ್ನು ಆರು ತಿಂಗಳಲ್ಲಿ ಪ್ರಧಾನಿ ಮೋದಿಗೆ ಕೋಲಿನಲ್ಲಿ ಹೊಡೆಯುತ್ತಾರೆ ಎಂದು ಹೇಳಿದ್ದರು. ಇದನ್ನು ಸದನದಲ್ಲಿ ಮೋದಿ ಪ್ರಸ್ತಾಪಿಸುತ್ತಿದ್ದಂತೆ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಲು ಮುಂದಾದರು. ಈ ಸಂದರ್ಭದಲ್ಲಿ ತಮ್ಮ ಮಾತನ್ನ ಮುಂದುವರೆಸಿದ ಮೋದಿ, ನಾನು ೪೦ ನಿಮಿಷಗಳಿಂದ ಮಾತನಾಡುತ್ತಲೇ ಇದ್ದೇನೆ, ಆದರೆ ಕರೆಂಟ್ ಪಾಸಾಗಿ ಅದು ತಲುಪಲು ಇಷ್ಟು ಹೊತ್ತು ಬೇಕಾಯಿತು ಎಂದು ರಾಹುಲ್ ಗಾಂದಿ ಅವರನ್ನ ಲೇವಡಿ ಮಾಡಿದ್ರು.
ಇನ್ನ, ಮುಂದಿನ ಆರು ತಿಂಗಳಲ್ಲಿ ನಾನು ಸೂರ್ಯ ನಮಸ್ಕಾರಗಳನ್ನು ಮಾಡಿ ಸಿದ್ದನಾಗುತ್ತೇನೆ, ನನ್ನ ಮೇಲೆ ಬರುವ ಆರೋಪ, ನಿಂದನೆಗಳಿಗೆ ದಂಡ ನಿರೋಧಕ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಸದಸ್ಯರು ನಕ್ಕರು.
ಒಟ್ಟಾರೆ, ಗಾಂಧಿ ವಿಚಾರವಾಗಿ ವಿಪಕ್ಷಗಳು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಗಾಂಧೀಜಿ ಅವರು ಎಲ್ಲರೂ ಆರಾಧಿಸುವ ಆದರ್ಶ ವ್ಯಕ್ತಿ ಎಂದು ಹೇಳೋ ಮೂಲಕ ವಿಪಕ್ಷಗಳ ಟೀಕೆಗೆ ಟಕ್ಕರ್ ನೀಡಿದ್ರು.
ಪ್ರಕಾಶ್.ಎಸ್