ಸರ್ಕಾರಿ ಅನುದಾನಿತ ಶಾಲೆಯ ಜಾಗಕ್ಕೆ ಪಟ್ಟು ಹಿಡಿದ ಗಾಂಧಿವಾಡ ಸೊಸೈಟಿ..!
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಹರಿಜನ ಸರ್ಕಾರಿ ಅನುದಾನಿತ ಶಾಲೆಯ ಎದುರು ಗಾಂಧಿವಾಡ ಸೊಸೈಟಿ ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಗಾಂಧಿವಾಡ ಸೊಸೈಟಿಯ ಜನರು ಸಾಲೆ ಇರುವ ಜಾಗವನ್ನ ಖರೀದಿ ಮಾಡಿದ್ದು, ಜಾಗ ಖಾಲಿ ಮಾಡಿಸಲು ಮುಂದಾಗಿದ್ದರು. ಇದರಿಂದಾಗಿ ಮಕ್ಕಳು ಸಹ ಬಾಗಿ;ಉಗಳನ್ನ ಮುಚ್ಚಿಸಿದ ವೇಳೆ ಬಾಗಿಲುಗಳನ್ನ ತೆರೆಯುವಂತೆ ಗಲಾಟೆ ಮಾಡಿ ಗಳಗಳನೆ ಅತ್ತರು. ಈ ದೃಶ್ಯ ಅತ್ಯಂತ ಬೇಸರ ತರಿಸುವಂತಿತ್ತು. ಮಕ್ಕಳು ಒಂದೆಡೆ ತಮ್ಮ ಸಾಲೆಗಾಗಿ ಪರದಾಡುತ್ತಿದ್ರೆ, ಗ್ರಾಮಸ್ಥರು ಸೊಸೈಟಿಯವರ ಜೊತೆಗೆ ಕಿತ್ತಾಡಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣವೂ ನಿರ್ಮಾಣಾವಗಿತ್ತು.
ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು..? ಮಾಡಿದರೇ ಸಿಗುವ ಫಲಾಫಲಾವೆನೇ..
ಅಂದ್ಹಾಗೆ ಈ ಶಾಲೆ 1956 ರಲ್ಲಿ ಪ್ರಾರಂಭವಾಗಿತ್ತು. ಆದರೆ ಇದೀಗ ಈ ಶಾಲೆಗೆ ಕಂಟಕ ಎದುರಾಗಿದೆ. ಈ ಜಾಗವನ್ನ ಶಾಲೆಯ ಕಟ್ಟಡಕ್ಕಾಗಿ ಬಿಟ್ಟುಕೊಡಲಾಗಿತ್ತು. ಗಾಂಧಿವಾಡ ಕೋ ಆಪರೇಟಿವ್ ಸೊಸಾಯಿಟಿ ಅವರು ಲ್ಯಾಂಡ್ ಅನ್ನು ಖರೀದಿ ಮಾಡಿದ್ರು. ಬಳಿಕ ಲೇಔಟ್ ಮಾಡಿ ಮಾರಾಟ ಮಾಡಲಾಗಿತ್ತು. ಆದ್ರೆ ಈಗ ಶಾಲೆಯ ಸ್ಥಳ ಬಿಟ್ಟುಕೊಡುವಂತೆ ಪಟ್ಟು ಹಿಡಿಯಲಾಗಿದೆ. ಗ್ರಾಮಸ್ಥರ ಆರೋಪದ ಪ್ರಕಾರ ಗಾಂಧಿವಾಡ ಸೊಸೈಟಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಜಹಾಗಕ್ಕಾಗಿ ದಾವೆ ಹೂಡಿದೆ ಎನ್ನಲಾಗಿದೆ. ಒಂದೆಡೆ ಶಾಲಾ ಕಟ್ಟಡ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಸೊಸೈಟಿಯವರು ಹೇಳಿದ್ದಾರೆ. ಆದ್ರೆ ಆದೇಶದಲ್ಲಿ ಶಾಲಾ ಕಟ್ಟಡ ಖಾಲಿ ಮಾಡುವಂತೆ ನಮೂದಿಸಿಲ್ಲ ಎನ್ನಲಾಗಿದೆ. ಒತ್ತಾಯ ಪೂರ್ವಕವಾಗಿ ಪೊಲೀಸ್ ಫೋರ್ಸ್ ತಂದು ಖಾಲಿ ಮಾಡಿಸಲಾಗುತ್ತಿದೆ ಅಂತ ಆರೋಪವೂ ಕೇಳಿ ಬಂದಿದೆ. ಒಟ್ಟಾರೆ ಸಾಲೆಯನ್ನ ಮುಚ್ಚಿಸುತ್ತಿದ್ದ ವೇಳೆ ಮಕ್ಕಳು ಗೋಳೋ ಎಂದು ಕಣ್ಣೀರಿಡುತ್ತಾ ಗೋಗೊರೆದ ದೃಶ್ಯ ಮನಕಲಕುವಂತಿತ್ತು.