Ganesh Chaturthi | ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆಯ ದಂಗಲ್ ಶುರು
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ಹೊಸದಾಗಿ ಈ ವರ್ಷ ಗಣೇಶನ ಪ್ರತಿಷ್ಠಾಪಿಸಲು ಶಿಕ್ಷಣ ಇಲಾಖೆ ಮುಕ್ತ ಅವಕಾಶ ನೀಡಿದೆ.
ಆದ್ರೆ ಶಿಕ್ಷಣ ಇಲಾಖೆಯ ನಡೆಗೆ ವಿರೋಧ ಕೇಳಿ ಬರ್ತಿದೆ.
ಶಾಲೆಯಲ್ಲಿ ಶುಕ್ತವಾರ ಒಂದು ದಿನ ನಮಾಜ್ ಮಾಡಿದ್ದಕ್ಕೆ ಶಾಲೆಯ ಮುಖ್ಯಸ್ಥರನ್ನ ಕೆಲಸದಿಂದ ಸಸ್ಪೆಂಡ್ ಮಾಡಿದೆ.
ಆದ್ರೆ ಇದೀಗ ಗಣೇಶ ಮೂರ್ತಿ ಕೂಡಿಸಲು ಅವಕಾಶ ಮಾಡಿಕೊಟ್ಟಿದೆ.
ಹಿಜಾಬ್ ಬೇಡಾ ಅಂದವರು ಈಗ ಗಣೇಶ ಕೂಡಿಸಲು ಹೇಗೆ ಅವಕಾಶ ಕೊಡ್ತೀರಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಗಣೇಶ ಕೂಡಿಸಲು ಅವಕಾಶ ನೀಡೊದಾದ್ರೆ ನಮ್ಗೆ ಶುಕ್ರವಾರ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ.
ಕ್ರಿಶ್ಚಯನ್ಸ್ ಗೆ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಆಚರಣೆಗೆ ಅವಕಾಶ ಕೊಡಿ.
ನಿಮ್ಮ ಓಟ್ ಬ್ಯಾಂಕಗೋಸ್ಕರ್ ನಿಮಗೆ ಹೇಗೆ ಬೇಕೋ ಹಾಗೆ ಮಾಡೊದಲ್ಲ.
ನಮ್ಗೂ ನಮಾಜ್ ಮಾಡೋದಕ್ಕೆ ಅವಕಾಶ ಕೊಡಿ ಅಂತಾ ಒತ್ತಾಯ ಮಾಡಿದ್ದಾರೆ.