Lord Ganesha in Dreams : ನಿಮ್ಮ ಕನಸಿನಲ್ಲಿ ಗಣಪತಿ ಬಂದರೆ ಅದರ ಅರ್ಥ ಏನು ಗೊತ್ತಾ..?
ನಿಮ್ಮ ಕನಸಿನಲ್ಲಿ ಗಣಪತಿ ಬಂದರೆ ಅದರ ಅರ್ಥ ಏನು ಗೊತ್ತಾ..?
ವಿಘ್ನಹರತ , ಬುದ್ಧಿ ಪ್ರಧಾನಕ , ಪ್ರಥಮ ಪೂಜ್ಯ , ಶುಕ್ರಕರ್ತ ಶಿವಪಾರ್ವತಿ ಪುತ್ರ , ಗೌರಿ ತನಯ ಇನ್ನೂ ಅನೇಕಾಧಿ ಹೆಸರುಗಳಿಂದ ಕರೆಸಿಕೊಳ್ಳುವ ಗಣಪತಿ ಸಾಮಾನ್ಯವಾಗಿ ಬಹುತೇಕರಿಗೆ ಫೇವರೇಟ್ ದೇವರಾಗಿರುತ್ತಾರೆ. ಗಾಡಿ ಮೇಲೆ ಅಂಗಡಿಗಳ ಒಳಗೆ ಎಲ್ಲಿ ನೋಡಿದ್ರು ಬಪ್ಪನನ್ನ ಸ್ಥಾಪಿಸಿ ಪೂಜಿಸಲಾಗಿತ್ತೆ ಆರಾಧಾನೆ ಮಾಡಲಾಗುತ್ತೆ..
ಆದ್ರೆ ಕೆಲವೊಮ್ಮೆ ಕೆಲವರ ಕನಸ್ಸಿನಲ್ಲಿ ಅನೇಕ ದೇವರುಗಳು ಬಂದಿರುತ್ತಾರೆ.. ಅದೇ ರೀತಿ ಗಣಪ.. ಹಾಗೆಯೇ ನಮ್ಮಲ್ಲಿ ಕನಸಿನಲ್ಲಿ ಬರುವ ಪ್ರತಿಯೊಂದಕ್ಕು ನಾನಾ ಅರ್ಥಗಳನ್ನ ಕಲ್ಪಿಸಲಾಗುತ್ತೆ.. ಕೆಟ್ಟದ್ದು ಒಳ್ಳೆಯದ್ದು ಎಂದೆಲ್ಲಾ ಕನಸಿನಲ್ಲಿ ಬರೋದನ್ನ ಜೀವನದಲ್ಲಿ ಲಿಂಕ್ ಮಾಡಿಕೊಳ್ತೇವೆ.. ಅದರಂತೆ ಗಣಪತಿ ಕನಸಿನಲ್ಲಿ ಬಂದ್ರೆ ಏನರ್ಥ..?
ಕನಸಿನಲ್ಲಿ ಗಣೇಶ ದೇವರು ಬರುವುದು ಒಳ್ಳೆಯ ಸಂಕೇತ, ಒಳ್ಳೆಯ ಸೂಚನೆ.. ಗಣಪತಿ ಬಪ್ಪ ಸಂಕಷ್ಟಹರತ. ಹೀಗಾಗಿ ಗಣಪ ಕನಸಿನಲ್ಲಿ ಬಂದ್ರೆ ಕಷ್ಟಗಳು ದೂರಾಗಗುತ್ತವೆ.. ಮುಂದೆಲ್ಲಾ ಒಳ್ಳೆಯದ್ದೇ ಆಗುತ್ತೆ ಎನ್ನುವ ನಂಬಿಕೆಯಿದೆ.. ಶುಭದ ಸಂಕೇತವಾಗಿರುವ ಗಣಪ ಪ್ರಥಮ ಪೂಜ್ಯ ಕೂಡ.. ಮಹಾದೇವ ಪಾರ್ವತಿಯ ಪುತ್ರ.. ಹೀಗಾಗಿ ಪ್ರತಿ ಶುಭ ಕಾರ್ಯದಲ್ಲಿ ಗಣಪನ ಆರಾಧನೆ ಮಾಡಲಾಗುತ್ತೆ.
ಹೀಗಾಗಿ ಯಾರಾದ್ರೂ ಗಣಪನ ಕನಸು ಕಂಡರೆ ಅವರ ಜೀವನದಲ್ಲಿ ಸಂತೋಷದ ಆಗಮನವಾಗುತ್ತಿದೆ ಎಂದು ಹೇಳಲಾಗುತ್ತದೆ.. ಅಲ್ಲದೇ ಶುಭದ ಜೊತೆಗೆ ಲಾಭದ ಸಂಕೇತವೂ ಗಣಪ ಆಗಿರೋದ್ರಿಂದ ಕನಸಿನಲ್ಲಿ ಗಣಪ ಬಂದ್ರೆ ಮುಂದೆ ವ್ಯಾವಹಾರಿಕ ಜೀವನದಲ್ಲಿ ಉನ್ನತಿ ಹಾಗೂ ಖಾಸಗಿ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಸಿಗುತ್ತೆ ಎಂದು ಹೇಳಲಾಗುತ್ತೆ.
ಇನ್ನೂ ಕೆಲವು ಬಾರಿ ಮನುಷ್ಯರು ಹೊತ್ತಿರುವ ಹರಕೆಗಳನ್ನ ಯಾವುದೋ ಕಾರಣಗಳಿಂದ ತೀರಿಸಲು ಸಾಧ್ಯವಾಗದೇ ಇದ್ದಾಗ, ಮರೆತುಹೋಗಿದ್ದಾಗ ಅಂತಹ ಸಂದರ್ಭಗಳಲ್ಲೂ ಸಹ ಹರಕೆಗಳನ್ನ ನೆನೆಪಿಸಲು ಕನಸಿನಲ್ಲಿ ಗಣೇಶ ಅಷ್ಟೇ ಅಲ್ಲ ಇತರೇ ದೇವಾನುದೇವತೆಗಳು ಬರಬಹುದು ಎಂದೂ ಕೂಡ ಹೇಳಲಾಗುತ್ತೆ..
Lord Ganesha : Do you know what it means if Ganesha appears in your dream?