ಗಣೇಶ ಹಬ್ಬಕ್ಕೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ..!
ವಿಘ್ನ ವಿನಾಯಕ ಗಣೇಶನ ಹಬ್ಬವನ್ನ ಪ್ರತಿ ವರ್ಷ ಭಾರತದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಮಕ್ಕಳು ಯುವಕರಂತೂ ಗಲ್ಲಿ ಗಲ್ಲಿಗಳಲ್ಲೂ ಬಪ್ಪನ ಕೂರಿಸಿ ಆರಾಧಿಸುತ್ತಾರೆ. ವಿಜರ್ಜನೆ ವೇಳೆ ಸಾವಿರಾರು ಜನ ಸೇರಿ ಕುಣಿದು ಕುಪ್ಪಳಿಸುತ್ತಾ ಆಚರಣೆ ಮಾಡ್ತಾರೆ.. ಇನ್ನೇನು ಈ ವರ್ಷವೂ ಗಣೇಶ್ ಚತುರ್ಥಿ ಬಂದೇ ಬಿಡ್ತು.
ಆದ್ರೆ ಈ ಬಾರಿ ಮೊದಲಿಂತೆ ಅದ್ಧೂರಿ ಗಣೇಶ ಹಬ್ಬ ಆಚರಣೆಗೆ ಮಹಾಮಾರಿ ಕೊರೊನಾ ತೊಡಕುಂಟು ಮಾಡಿದೆ. ಮೊದಲಿಗೆ ಸರ್ಕಾರ ಸಾರ್ವಜನಿಕವಾಗಿ ಗಣೇಶನ ಕೂರಿಸಲು ಅನುಮತಿ ನೀಡಿರಲಿಲ್ಲ. ಆದ್ರೆ ವಿರೋಧಗಳ ನಂತರ ಇದೀಗ ಸಾರ್ವಜನಿಕವಾಗಿ ಗಣೇಶನ ಕೂರಿಸಲು ಷರತ್ತು ಬದ್ಧ ಅನುಮತಿ ಸಿಕ್ಕಿದೆ. ತಜ್ಞರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಆದ್ರೆ ಕೋವಿಡ್ ಮಾರ್ಗಸೂಚಿಯನ್ನ ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಮಾರ್ಗಸೂಚಿಯಲ್ಲೇನಿದೆ ಗಣೇಶ ಮೂರ್ತಿಯನ್ನು 5 ದಿನಗಳ ಒಳಗೆ ವಿಸರ್ಜಿಸಬೇಕು
4 ಅಡಿಗಿಂತಲೂ ಎತ್ತರವಾದ ಗಣೇಶನ ಕೂರಿಸುವಂತಿಲ್ಲ
ಸ್ಥಳೀಯ ಆಡಳಿತದ ಅನುಮತಿ ಮೇರೆಗೆ ಗ್ರಾಮಕ್ಕೆ ಒಂದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ನಗರಗಳಲ್ಲಿ ವಾರ್ಡ್ ಗೆ ಒಂದರಂತೆ ಮಾತ್ರ ಗಣೇಶನ ಕೂರಿಸುವುದಕ್ಕೆ ಅನುಮತಿ
50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲ
ಶಾಲಾ ಕಾಲೇಜುಗಳಲ್ಲಿ ಗಣೇಶ ಕೂರಿಸುವಂತಿಲ್ಲ
ಏಕಕಾಲಕ್ಕೆ 20 ಜನರಿಗಿಂತ ಹೆಚ್ಚಿನ ಜನರು ಸೇರುವಂತಿಲ್ಲ
ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಗಣೇಶ ಕೂರಿಸಲು ಅವಕಾಶ
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕ್ಯಾಂಪ್
ಮನರಂಜನೆ, ಡಿಜೆ, ಮೆರವಣಿಗೆಗೆ ಅವಕಾಶವಿಲ್ಲ