GANG RAPE ಇಂದಿನ ದಿನಮಾನದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಎಲ್ಲರಿಗೂ ತಿಳಿದೆ ಇದೆ . ಅರಂತೆ ಅಪರಾದಿಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದಾರೆ . ಅತ್ಯಾಚಾರ ಪ್ರಕರಣಗಳಿಗೆ ಶಿಕ್ಷೆ ಇದ್ದರೂ ದಿನಕ್ಕೆ ಹತ್ತಾರು ಪ್ರಕರಣ ದಾಕಲಾಗುತ್ತಿವೆ.
ಈಗ ಇದೇ ಸಾಲಿಗೆ ಮತ್ತೊಂದು ಪ್ರಕರಣ ದಾಖಲಾಗಿದೆ. ಹೌದು
ಮೂವರು ಕಾಮುಕರು ಮಹಿಳೆಯೊಬ್ಬರ ಮನೆಗೆ ನುಗ್ಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ ಮಹಿಳೆಯ ಖಾಸಗಿ ಭಾಗಗಗಳಿಗೆ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ.
ಈ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದರು ಎಂದು ತಿಳಿದು ಬಂದಿದು ಕಾಮುಕರು 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಿದ್ದಾರೆ.

ಒಂಟಿಯಾಗಿರುವ ಮಹಿಳೆಯನ್ನು ನೋಡಿಕೊಂಡ ಕಾಮುಕರು ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ , ಇದಷ್ಟೆ ಅಲ್ಲದೆ ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದು .ನಂತರ ಮಹಿಳೆಯ ಖಾಸಗಿ ಅಂಗಗಳಿಗೆ ಸಿಗರೇಟ್‌ನಿಂದ ಸುಟ್ಟಿದ್ದಾರೆ.
ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದು . ಮೂವರಲ್ಲೊಬ್ಬ ಕಾಮುಕ ಈ ಕೃತ್ಯವನ್ನೂ ವೀಡಿಯೋ ಮಾಡಿಕೊಂಡು ಪೊಲೀಸರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯ ನಡೆದ ಒಂದೆರಡು ದಿನಗಳ ನಂತರ ಮಹಿಳೆ ನೆರೆಯವರೊಂದಿಗೆ ನಡೆದ ಕೃತ್ಯವನ್ನು ವಿವರಿಸಿದ್ದಾಳೆ . ವಿಷಯತಿಳಿದ ಅವರು NGO ಸಂಸ್ಥೆಯೊಂದಕ್ಕೆ ಸಂಪರ್ಕಿಸಿ ಮಹಿಳಿಗೆ ಧೈರ್ಯ ತುಂಬಿದ್ದಾರೆ . ತದನಂತರ ಮಹಿಳೆ ಕುರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹೀನಾಯ ಕೃತ್ಯ ಎಸಗಿದ ಮೂವರು ಕಾಮುಕರ ವಿರುದ್ದ
IPC ಸೆಕ್ಷನ್ 376 -ಅತ್ಯಾಚಾರ,
376 ಡಿ -ಸಾಮೂಹಿಕ ಅತ್ಯಾಚಾರ,
377 -ಅಸ್ವಾಭಾವಿಕ ಲೈಂಗಿಕತೆ,
324 -ಅಪಾಯಕಾರಿ ಆಯುಧದಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು,
ಹಾಗೂ ಇತರೆ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.








