ಅಪ್ರಾಪ್ತೆ ಮೇಲೆ ಪ್ರತ್ಯೇಕ ಸ್ಥಳಗಳಲ್ಲಿ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ
ಮುಂಬೈ : ಮುಂಬೈನಲ್ಲಿ 16 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಕೃತ್ಯಕ್ಕೆ ಸಂಬಂಧಿಸಿದಂತೆ 6 ಜನ ಕಾಮುಕರನ್ನ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಸ್ನೇಹಿತರ ಬರ್ತ್ ಡೇ ಪಾರ್ಟಿ ಗೆ ತೆರಳಿದ್ದಾಗ ಆಕೆಯನ್ನ ಅಪಹಿರಿಸಿರುವ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮೇ ಘಟನೆ ಮೇ 31 ರಂದು ನಡೆದಿದ್ದು, ಬಾಲಕಿ ಜೂನ್ 1 ಕ್ಕೆ ಮನೆಗೆ ವಾಪಸ್ ಆಗಿ ಈ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.. ತಕ್ಷಣವೇ ಆಕೆಯ ತಾಯಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಗಳನ್ನ ಬಂಧಿಸಲಾಗಿದೆ. ಬಾಲಕಿಯ 6 ಜನ ಸ್ನೇಹಿತರೇ ಆಕೆಯನ್ನ ಅಪಹರಿಸಿ ಪ್ರತ್ಯೇಕ ಸ್ಥಳಗಳಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಇನ್ನೂ ಸಂತ್ರಸ್ತೆ ಹಾಗೂ ಆರೋಪಿಗಳೆಲ್ಲರೂ ಮಲಾಡ್ ನ ಮಾಧ್ ಮತ್ತು ಮಾಲ್ವಾನಿಯ ನಿವಾಸಿಗಳಾಗಿದ್ದಾರೆ. ಸಂತ್ರಸ್ತೆ ಹೇಳಿಕೊಂಡಿರುವಂತೆ ಆಕೆಯ ಸ್ನೇಹಿತರು ಆಕೆಯನ್ನ ಬರ್ತ್ ಡೇ ಪಾರ್ಟಿಗೆ ಆಹ್ವಾನಿಸಿದ್ದರು.. ಇದನ್ನ ನಂಬಿ ಆಕೆ ಅವರು ಹೇಳಿದ್ದ ಸ್ಥಳ ಮಾರ್ವ್ ಗೆ ತೆರಳಿದ್ದಳು. ಅಲ್ಲಿ ಆಕೆಯ ಮೂವರು ಪುರುಷ ಸ್ನೇಹಿತರು ಪಾರ್ಕಿಂಗ್ ಲಾಟ್ ನಲ್ಲಿ ಕಾರ್ ಪಾರ್ಕ್ ಮಾಡಿ ಕಾಯುತ್ತಿದ್ದರು.. ಅಲ್ಲಿಗೆ ಬಾಲಕಿ ತೆರಳಿದ ನಂತರ ಮೊದಲಿಗೆ ಕೇಕ್ ಕಟ್ ಮಾಡಿದ್ದಾರೆ.. ಬಳಿಕ ಆಕೆಯ ಮೇಲೆ ಮೂವರೂ ಸೇರಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ನಂತರ ಆಕೆ ತಂದೆ ತಾಯಿ ಬಳಿಗೆ ಹೋಗಲು ಹೆದರಿಕೊಂಡಿದ್ದರಿಂದ ಸ್ನೇಹಿತನ ಮನೆಗೆ ತೆರಳಿದ್ದಾಳೆ. ಈ ಸ್ನೇಹಹಿತ ಸಂತ್ರಸ್ತೆಗೆ ಇನ್ಸ್ಟಾಗ್ರಾಮ್ ನ ಮೂಲಕ ಪರಿಚಯವಾಗಿದ್ದವ.. ಬಳಿಕ ಆತನೂ ಸಹ ಅತ್ಯಾಚಾರವೆಸಗಿದ್ದಾನೆ. ಬಳಿಕ ಮತ್ತೆ ಇಬ್ಬರು ಆನ್ ಲೈನ್ ಸ್ನೇಹಿತರ ಮನೆಗೆ ತೆರಳಿದ್ದಾಳೆ. ಅವರೂ ಆಕೆಯ ಮೇಲೆ ಅತ್ಯಾಚಾರವೆಸಗಿರೋದಾಗಿ ಆರೋಪಿಸಿದ್ದಾಳೆ.. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು 6 ಮಮದಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.








