ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಕೇರಳ : ಪಾರ್ಕಿಂಗ್ ಮಾಡಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ಕೇರಳದ ಕೋಯಿಕ್ಕೋಡ್ ನ ಚೆವಯೂರ್ ನಲ್ಲಿ ನಡೆದಿದೆ.
ಘಟನೆಯ ನಂತರ ಮನೆಗೆ ಹಿಂತಿರುಗಿದ ಮಹಿಳೆ ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಬಳಿಕ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳನ್ನು ಗೋಪಿಶ್ ಮತ್ತು ಮೊಹಮದ್ ಶಮೀರ್, ಇಂದ್ರೇಶ್ ಎಂದು ಗುರುತಿಸಲಾಗಿದೆ. ಇನ್ನೂ ಪ್ರಕರಣ 3ನೇ ಆರೋಪಿಯಾಗಿರುವ ಇಂದ್ರೇಶ್ 2003 ರಲ್ಲಿ ನಡೆದ ಮೂವರ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿದ ಮಹಿಳೆ ತನ್ನ ದ್ವಿಚಕ್ರ ವಾಹನದಲ್ಲಿ ತಿರುಗಾಡಿ ವಯಲ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಗೋಪಿಶ್ ಮತ್ತು ಶಮೀರ್ ನಿಲ್ದಾಣದಲ್ಲಿದ್ದ ಆಕೆಯನ್ನು ಗಮನಿಸಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಗಳು ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಕೊಟ್ಟಂಪರಂಬಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನಿಲುಗಡೆ ಮಾಡಲಾಗಿದ್ದ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, 3ನೇ ಆರೋಪಿ ಇಂದ್ರೇಶ್ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಮಹಿಳೆಯನ್ನು ಕನ್ನಮಂಗಲ ಆಟೋ ನಿಲ್ದಾಣದ ಬಿಟ್ಟು ಪರಾರಿಯಾಗಿದ್ಧಾರೆ. ಮನೆಗೆ ಹೋದ ಮಹಿಳೆ ಲೈಂಗಿಕ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಪೋಷಕರು ಚೆವಯೂರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಆದ್ರೆ ಮತ್ತೊಬ್ಬ ಆರೋಪಿ ಇಂದ್ರೇಶ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.








