ಫೇಸ್ ಬುಕ್ ಸ್ನೇಹಿತನ ನಂಬಿ ಹೋದ ಮಹಿಳೆ – 25 ಮಂದಿಯಿಂದ ಸಾಮೂಹಿಕ ಅತ್ಯಾಚಾರ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜೊತೆ ಸ್ನೇಹ , ಸಲುಗೆ ಬೆಳೆಸುವ ಮುನ್ನ ಎಚ್ಚರಿಕೆಯಿಂದ ಇರಬೇಕು… ಅನೇಕರು ಇದೇ ರೀತಿ ಹೆಚ್ಚಾಗಿ ಓಫೇಸ್ ಬುಕ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಆದ ಅಪರಿಚಿತರಿಂದ ಮೋಸ ಹೋಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ… ಅದ್ರಲ್ಲೂ ಹೆಚ್ಚಾಗಿ ಮಹಿಳೆಯರು ಇಂತಹ ವಂಚನೆಗಳಿಗೆ ಒಳಗಾಗೋದು ಹೆಚ್ಚು.. ಆದ್ರೂ ಸಹ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ..
ದೆಹಲಿಯಲ್ಲಿ ವಿದ್ಯಾವಂತ ಮಹಿಳೆಯೊಬ್ಬಳು ತನ್ನ ಫೇಸ್ ಬುಕ್ ಸ್ನೇಹಿತನ ನಂಬಿ ಆತನನ್ನ ಮೀಟ್ ಮಾಡಲು ಹೋಗಿ ದೊಡ್ಡ ಅನಾಹುತವನ್ನ ತಂದುಕೊಂಡಿದ್ಧಾಳೆ. ಫೇಸ್ ಬುಕ್ ಗೆಳೆಯನ ಭೇಟಿಯಾಗಲು ಹೋದವಳ ಮೇಲೆ ಬರೋಬ್ಬರಿ 25 ಮಂದಿ ಸೇರಿ ಕಾಡಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಮೇ 3ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಾಗರ್ ಎಂಬ 23 ವರ್ಷದ ವರ್ಷದ ಯುವಕ ಸಂತ್ರಸ್ತೆಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಾನೆ. ಅನೇಕ ದಿನಗಳವರೆಗೆ ಫೇಸ್ ಬುಕ್ ನಲ್ಲಿ ಮಾತುಕತೆ ನಡೆದ ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪರಸ್ಪರ ಫೋನ್ ನಂಬರ್ ಗಳನ್ನ ವಿನಿಮಯ ಮಾಡಿಕೊಂಡಿದ್ದಾರೆ. ಇದಾದ ಬನಂತರ ಇಬ್ಬರೂ ಫೋನ್ ನಲ್ಲಿ ಮಾತುಕತೆ ಆರಂಭಿಸಿದ್ಧಾರೆ. ಮದುವೆ ಆಗುವಂತೆ ಕೇಳಿದ್ದಾನೆ.
ಅಲ್ಲದೆ, ಆಕೆಯನ್ನು ತನ್ನ ಪಾಲಕರಿಗೆ ಪರಿಚಯ ಮಾಡಿಕೊಡುವುದಾಗಿಯೂ ಹೇಳಿದ್ದಾನೆ. ಇದನ್ನ ನಂಬಿದ ಸಂತ್ರಸ್ತೆ ಆತನ ಮಾತನ್ನು ನಂಬಿ ಮೇ 3ರಂದು ಆತನಿದ್ದ ಸ್ಥಳಕ್ಕೆ ಹೋಗಿದ್ದಾಳೆ. ಬಳಿಕ ಸಾಗರ್ ಆಕೆಯನ್ನು ರಾಮಗಢದ ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಸಹೋದರರು ಸ್ನೇಹಿತರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ಧಾರೆ. ನಂತರ ಮಾರನೇ ದಿನ ಮಹಿಳೆಯನ್ನು ಸ್ಕ್ರ್ಯಾಪ್ ಡೀಲರ್ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಆಕೆ ಮೇಲೆ ಐವರು ಅತ್ಯಾಚಾರವೆಸಗಿದ್ಧಾರೆ. ಮಹಿಳೆಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಆಕೆಯನ್ನು ಬದರ್ಪುರ್ ಗಡಿ ಬಳಿ ಎಸೆದು ಪರಾರಿಯಾಗಿದ್ದಾರೆ.
ಬಳಿಕ ಮಹಿಳೆಯು ಮೇ 12 ರಂದು ಹಾಸ್ಸನ್ಪುರ್ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಪ್ರಮುಖ ಾರೋಪಿ ಸಾಗರ್ ನನ್ನ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.








