ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಹುಳಿಹಿಂಡಿದ್ದ ಗಂಗಾ ಕುಲಕರ್ಣಿಗೆ ಆತ್ಮಹತ್ಯೆ..!

Kariyappa N by Kariyappa N
October 29, 2020
in Newsbeat, ರಾಜ್ಯ
sucide ganga kulkarni
Share on FacebookShare on TwitterShare on WhatsappShare on Telegram

ಕೊಪ್ಪಳ: ಚಿತ್ರಸಾಹಿತಿ, ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಹುಳಿ ಹಿಂಡಿ, ಪತ್ನಿಯಿಂದ ವಿಚ್ಛೇದನಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಿ ಹಾಗೂ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಾ ಕುಲಕರ್ಣಿ ನಿಜವಾದ ಹೆಸರು ಜ್ಯೋತಿ ಕುಲಕರ್ಣಿ. ಈಕೆ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದು ಮಾತ್ರವಲ್ಲದೆ, ಹಲವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಟೋಪಿ ಹಾಕಿದ ಅರೋಪ ಎದುರಿಸುತ್ತಿದ್ದಳು.

ಈ ಹಿನ್ನೆಲೆಯಲ್ಲಿ ಕೊಪ್ಪಳದ ಕುಷ್ಟಗಿಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಹಲವು ವಂಚನೆ ಕೇಸ್‍ಗಳು ದಾಖಲಾಗಿದ್ದವು. 2017ರಿಂದ ಕುಷ್ಟಗಿ ಕೋರ್ಟ್‍ಗೆ ವಿಚಾರಣೆಗೆ ಹಾಜರಾಗುತ್ತಿದ್ದ ಗಂಗಾ ಕುಲಕರ್ಣಿ, ಕಲ್ಯಾಣ್ ಪತ್ನಿ ಅಶ್ವಿನಿ ನಾಪತ್ತೆಯಾದ ನಂತರ ಕೋರ್ಟ್‍ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಗೀತಾ ಕುಲಕರ್ಣಿ ವಿರುದ್ಧ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ನ್ಯಾಯಾಲಯದಲ್ಲಿ ತಮ್ಮ ಪರ ವಕೀಲರನ್ನು ಭೇಟಿಯಾಗಲು ಬಂದಿದ್ದಳು. ಕುಷ್ಟಗಿಗೆ ಬಂದ ಗಂಗಾ ಕುಲಕರ್ಣಿ ವಿಷಸೇವನೆ ಮಾಡಿಕೊಂಡೇ ಕೋರ್ಟ್‍ಗೆ ಬಂದಿದ್ದಳು. ವಿಷದ ತೀವ್ರತೆ ಹೆಚ್ಚುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

February 15, 2026
ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

February 15, 2026

ganga kulkarni sucide

20 ಜನರಿಂದ ಲಕ್ಷ ಲಕ್ಷ ಪೀಕಿ ವಂಚಿಸಿದ್ದ ಗಂಗಾ ಕುಲಕರ್ಣಿ..
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಗಂಗಾ ಕುಲಕರ್ಣಿ ವಂಚನೆ ಮಾಡಿದ್ದಳು. ಕೆಲಸ ಕೊಡಿಸುವುದಾಗಿ ನಂಬಿಸಿ ತಲಾ ಒಬ್ಬರಿಗೆ 3 ಲಕ್ಷದಂತೆ ಸುಮಾರು 20 ಜನರಿಂದ ಹಣ ಪೀಕಿದ್ದ ಟೋಪಿ ಹಾಕಿದ್ದಳಂತೆ. ಇವರಲ್ಲಿ ಕುಷ್ಟಗಿ ತಾಲೂಕಿನ ಸಂತೋಷ್ ಕುಲಕರ್ಣಿ ಎಂಬುವರಿಂದ 3 ಲಕ್ಷ ಪಡೆದು ವಂಚನೆ ಮಾಡಿದ್ದಳಂತೆ. ಈ ಸಂಬಂಧ 2016ರಲ್ಲೇ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿತ್ತು.

cheting caseಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿದ್ದವು. ಕುಷ್ಟಗಿ ಪೊಲೀಸ್ ಇನ್ಸ್‍ಪೆಕ್ಟರ್ ವಿಶ್ವನಾಥ ಹಿರೇಗೌಡರ್, ಪ್ರಕರಣದ ತನಿಖೆ ನಡೆಸಿ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಗಂಗಾ ಕುಲಕರ್ಣಿ ಸಾಮಾನ್ಯ ಮಹಿಳೆ ಅಲ್ಲ ಎಂದು ಚಾರ್ಜ್‍ಶೀಟ್‍ನಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ ಉಲ್ಲೇಖಿಸಿದ್ದಾರೆ.

ಡೆತ್‍ನೋಟ್‍ನಲ್ಲಿ ಪಶ್ಚಾತ್ತಾಪ..!
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಗಾ ಕಲುಕರ್ಣಿ ಡೆತ್‍ನೋಟ್ ಬರೆದಿದ್ದಾಳೆ. ಮರಾಠಿಯಲ್ಲಿ ಡೆತ್‍ನೋಟ್ ಬರೆದಿರುವ ಗಂಗಾಕುಲರ್ಣಿ, ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ. ನನ್ನ ಮೇಲೆ ಹಲವು ಕೇಸ್‍ಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ ಎಂದು ವಕೀಲರು ಹಾಗೂ ನ್ಯಾಯಾಧೀಶರನ್ನು ಉಲ್ಲೇಖಿಸಿ ಮನವಿ ಮಾಡಿದ್ದಾಳೆ.

death note

ಕೆ.ಕಲ್ಯಾಣ್ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕಲುಕರ್ಣಿ
ಕೆ.ಕಲ್ಯಾಣ್‍ರ ಬೆಂಗಳೂರು ಮನೆಯಲ್ಲಿ ಗಂಗಾ ಕುಲಕರ್ಣಿ ಮನೆಗೆಲಸಕ್ಕೆ ಸೇರಿದ್ದಳು. ಈ ವೇಳೆ ಕಲ್ಯಾಣ್ ಪತ್ನಿ ಅಶ್ವಿನಿ ಅವರ ವಿಶ್ವಾಸ ಗಳಿಸಿದ್ದ ಗಂಗಾ ಕುಲಕರ್ಣಿ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಜ್ಯೋತಿಷಿ ಶಿವಾನಂದ ವಾಲಿ ಜೊತೆ ಸೇರಿಕೊಂಡು 19 ಲಕ್ಷ ರೂ. ತನ್ನ ಅಕೌಂಟ್‍ಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ನಂತರ ಕಲ್ಯಾಣ್‍ರಿಂದ ಪತ್ನಿ ಅಶ್ವಿನಿಯನ್ನು ದೂರಮಾಡಿ ಬೆಳಗಾವಿಗೆ ಕರೆದೊಯ್ದು ಪ್ರತ್ಯೇಕ ಮನೆ ಮಾಡಿಸಿದ್ದರು. ಅಲ್ಲಿದ್ದುಕೊಂಡೇ ಅಶ್ವಿನಿ, ತಂದೆಯ ಆಸ್ತಿಯನ್ನೆಲ್ಲಾ ಶಿವಾನಂದ ವಾಲಿ ಹೆಸರಿಗೆ ಮಾಡಿಸಿಕೊಂಡಿದ್ದಲ್ಲದೆ, ಶಿವಾನಂದ ವಾಲಿ ಜತೆ ಸೇರಿಕೊಂಡು ಅಶ್ವಿನಿಯಿಂದ ಕಲ್ಯಾಣ್‍ಗೆ ಡೈವೋರ್ಸ್ ಅರ್ಜಿ ಹಾಕಿಸಿದ್ದಳು.
ಪತ್ನಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಕೆ.ಕಲ್ಯಾಣ್ ನೀಡಿದ ದೂರಿನ ಮೇರೆಗೆ ಬೆಳಗಾವಿಯ ಮಾಳಮಾರುತಿ ಪೊಲೀಸರು ಗಂಗಾ ಕುಲಕರ್ಣಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: cheating case koppalacine lyricistdivorce caseganga kulkarnik.kalyankustagi courtshivananda vaaliSucide
ShareTweetSendShare
Join us on:

Related Posts

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

by Shwetha
February 15, 2026
0

ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರಾವಧಿಯ ಸಾವಿರ ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಈ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ...

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

by Shwetha
February 15, 2026
0

ಬೆಂಗಳೂರು: ರಾಜ್ಯದ ಸಮಸ್ತ ಪಡಿತರ ಚೀಟಿದಾರರಿಗೆ ಜಿಲ್ಲಾಡಳಿತವು ಅತ್ಯಂತ ಮಹತ್ವದ ಮತ್ತು ಖಡಕ್ ಎಚ್ಚರಿಕೆಯೊಂದನ್ನು ರವಾನಿಸಿದೆ. ಬಡವರ ಹಸಿವು ನೀಗಿಸಲು ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಅನ್ನಭಾಗ್ಯ...

ಕುರ್ಚಿ ಫೈಟ್ ನಡುವೆ ಡಿಕೆಶಿ Quotes :ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ

ಕುರ್ಚಿ ಫೈಟ್ ನಡುವೆ ಡಿಕೆಶಿ Quotes :ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ

by Shwetha
February 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಮತ್ತು ಸಿಎಂ ಕುರ್ಚಿ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಿರುವ ಮಾರ್ಮಿಕ...

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

by Shwetha
February 15, 2026
0

ಕರ್ನಾಟಕಾ ರಾಜ್ಯ ಸರ್ಕಾರವು ಬಡವರು ಮತ್ತು ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ಕ್ರಾಂತಿಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಬಿಪಿಎಲ್ ಕಾರ್ಡ್ ದಾರರು ಮತ್ತು ಸರ್ಕಾರಿ ನೌಕರರು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 15, 2026
0

ದಿನ ಭವಿಷ್ಯ: 15-02-2026 1. ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವ ದಿನವಾಗಿದೆ. ಸರ್ಕಾರಿ ಕೆಲಸಗಳಲ್ಲಿ ಅಥವಾ ಮೇಲಾಧಿಕಾರಿಗಳ ಜೊತೆಗಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಕೋಪವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram