ಕೊಪ್ಪಳ: ಸಿನಿಮೀಯ ರೀತಿಯಲ್ಲಿ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನ ಕಿಡ್ನಾಪ್ ಮಾಡಿರುವ ಘಟನೆ ನಡೆದಿದ್ದು, ಕಿಡ್ನಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೆಂಬರ್2ಕ್ಕೆ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಗಂಗಾವತಿ ನಗರಸಭೆ ಅಧ್ಯಕ್ಷ ಪಟ್ಟವನ್ನು ಹಿಡಿಯಲು ಬಿಜೆಪಿಯಿಂದ ಕಿಡ್ನಾಪ್ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಅವರನ್ನು ಕಿಡ್ನಾಪ್ ಮಾಡಲಾಗಿದೆ.
ನಗರಸಭೆ ಬಿಜೆಪಿ ಸದಸ್ಯರಾದ ಅಜಯ್ ಬಿಚ್ಚಾಲಿ, ನವೀನ್ ಪಾಟೀಲ್, ಪರಶುರಾಮ ಮಡ್ಟೆರ್, ಮಾಜಿ ಸದಸ್ಯ ರಾಚಪ್ಪ ಸಿದ್ದಾಪುರ ಹಾಗೂ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ, ಒಟ್ಟು 08 ಜನರಿಂದ ಕಾಂಗ್ರೆಸ್ ಸದಸ್ಯನ ಕಿಡ್ನಾಪ್ ಮಾಡಲಾಗಿದೆ. ಗಂಗಾವತಿ ಪಟ್ಟಣದ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಕುಳಿತಿದ್ದ ಮನೋಹರಸ್ವಾಮಿಯನ್ನು ಎಳೆದುಕೊಂಡು ಬಿಜೆಪಿ ಸದಸ್ಯರು ಎಳೆದುಕೊಂಡು ಹೋಗಿದ್ದರು. ಕತ್ತು ಹಿಡಿದು ಎಳೆದುಕೊಂಡು ಹೊಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿಡ್ನಾಪ್ ಮಾಡಿದ ಎಂಟು ಜನರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡ್ನಾಪರ್ ಅರೆಸ್ಟ್, ಘಟನೆ ಹಿನ್ನೆಲೆ ಏನು..!
35 ಸದಸ್ಯಬಲ ಹೊಂದಿರುವ ಗಂಗಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನ.2ರಂದು ನಡೆಯಲಿದೆ. ಗಂಗಾವತಿ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಭಾರಿ ಕಸರತ್ತು ನಡೆಸಿವೆ. ಹೀಗಾಗಿ ಈ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಮನೋಹರ ಸ್ವಾಮಿ ಅವರನ್ನು ಮಧ್ಯರಾತ್ರಿ ಮಬ್ಬು ಬರಿಸುವ ಔಷಧಿಯನ್ನು ಸ್ಪ್ರೇ ಮಾಡಿ ಕಿಡ್ನಾಪ್ ಮಾಡಿ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಅಪಹರಣಕಾರರು ಗಂಗಾವತಿಯಿಂದ ಅಪಹರಿಸಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಕಿಡ್ನಾಪರ್‍ಗಳಿಂದ ತಪ್ಪಿಸಿಕೊಂಡು ಕಾರಿನಿಂದ ಇಳಿದ ಮನೋಹರಸ್ವಾಮಿ, ಹಳಿಯಾಳದ ಶಿವಾಜಿ ಸರ್ಕಲ್‍ಗೆ ಓಡಿ ಬಂದಿದ್ದಾರೆ. ಕಿಡ್ನಾಪ್ ಮಾಡಿದ್ದ ಬಿಜೆಪಿ ಸದಸ್ಯರು ಹಾಗೂ ರೌಡಿಶೀಟರ್ ಮನೋಹರ ಸ್ವಾಮಿಯನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಈ ವೇಳೆ ಮನೋಹರ ಸ್ವಾಮಿ ರಕ್ಷಣೆಗಾಗಿ ಕಿರುಚಾಡಿದ್ದರಿಂದ ಅಲ್ಲೇ ಇದ್ದ ಹಳಿಯಾಳ ಪೊಲೀಸರು ಮಹೋಹರ ಸ್ವಾಮಿ ಅವರನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದಾರೆ. ನಂತರ ಕಿಡ್ನಾಪ್ ಆಗಿದ್ದ ಮನೋಹರ ಸ್ವಾಮಿ ಅವರನ್ನು ಗಂಗಾವತಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ರಾಕೇಶ ನಾಯಕ, ಶರಣಪ್ಪ ಅಕ್ಕಿರೊಟ್ಟಿ, ಬಸವರಾಜ್ ಎಂಬುವರನ್ನು ಬಂಧಿಸಲಾಗಿದೆ. ಚಾಲಕ ರೌಡಿಶೀಟರ್ ರವಿ ಪರಾರಿಯಾಗಿದ್ದಾನೆ. ಕಾರನ್ನು ಜಪ್ತಿ ಮಾಡಿದ ಪೊಲೀಸರು ತನಿಖೆ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel