ಗಂಗೂಲಿಗೆ ಮಾತನಾಡುವ ಹಕ್ಕಿಲ್ಲ Ganguly saaksha tv
ಸೆಲೆಕ್ಷನ್ ಕಮಿಟಿ ಪರವಾಗಿ ಸೌರವ್ ಗಂಗೂಲಿಗೆ ಮಾತನಾಡುವ ಹಕ್ಕಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ದಿಲೀಪ್ ವೆಂಗಸರ್ಕಾರ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಸಿದ ವಿವಾದ ಸದ್ಯಕ್ಕೆ ಮುಗಿಯುವ ಹಂತ ಕಾಣುತ್ತಿಲ್ಲ.
ಬಿಸಿಸಿಐನ ಈ ನಿರ್ಧಾರವನ್ನು ಕೆಲವರು ಸಮರ್ಥಿಸುತ್ತಿದ್ದರೇ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅದರಂತೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ದಿಲೀಪ್ ವಂಗಸರ್ಕಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಗಂಗೂಲಿ ವಿರುದ್ಧ ಕಿಡಿಕಾರಿದ್ದಾರೆ.
ಸೆಲೆಕ್ಷನ್ ಕಮಿಟಿ ವಿಷಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಲೆ ಹಾಕುವುದು ಸರಿಯಲ್ಲ.
ಸೆಲೆಕ್ಷನ್ ಕಮಿಟಿ ಪರವಾಗಿ ದಾದಾ ಮಾತನಾಡುವ ಹಕ್ಕಿಲ್ಲ. ಅವರು ಬಿಸಿಸಿಐ ಅಧ್ಯಕ್ಷ, ಅವರು ಸೆಲೆಕ್ಷನ್ ಕಮಿಟಿಪರವಾಗಿ ಮಾತನಾಡಕೂಡದು.
ತಂಡದಲ್ಲಿ ಏನಾದ್ರೂ ಸಮಸ್ಯೆ ಇದ್ದರೇ ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಮಾತನಾಡಬೇಕು. ಈ ವಿಚಾರ ಗಂಗೂಲಿ ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ









