Ganguly | ವಿರಾಟ್ ಸೆಂಚೂರಿ ಸಿಡಿಸಬೇಕು
ಪ್ರಸ್ತುತ ವಿರಾಟ್ ಕೊಹ್ಲಿ ದೇಶಕ್ಕಾಗಿ ಅಲ್ಲ, ತನಗಾಗಿ ಕೂಡ ರನ್ ಗಳನ್ನ ಗಳಿಸಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಅದೇ ರೀತಿ ಕೊಹ್ಲಿ ಮತ್ತೆ ಫಾರ್ಮ್ ಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಗೇ ವಿರಾಟ್ ಸೆಂಚೂರಿ ಸಿಡಿಸಿದ್ರೆ ನೋಡಬೇಕೆಂದಿದ್ದೇನೆ ಎಂದು ದಾದಾ ಹೇಳಿದ್ದಾರೆ.
ಟಿ 20 ವಿಶ್ವಕಪ್ ಆರಂಭಕ್ಕೂ ಮುನ್ನಾ ಏಷ್ಯಾಕಪ್ ರೂಪದಲ್ಲಿ ಬಂದಿರುವ ಅವಕಾಶವನ್ನು ವಿರಾಟ್ ಕೊಹ್ಲಿ ಬಳಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.

ಈ ಸೀಸನ್ ಕೊಹ್ಲಿ ತುಂಬಾ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳುತ್ತಾರೆ ಅನ್ನೋ ನಂಬಿಕೆ ನನಗಿದೆ. ಅದಕ್ಕೆ ತಕ್ಕಂತೆ ಕೊಹ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.
ಆದ್ರೆ ಟಿ 20 ಕ್ರಿಕೆಟ್ ನಲ್ಲಿ ಸೆಂಚೂರಿ ಮಾಡುವ ಅವಕಾಶಗಳು ತೀರಾ ಕಡಿಮೆ. ಆದ್ರೂ ಈ ಏಷ್ಯಾಕಪ್ ಎಲ್ಲರಿಗೂ ನೆನಪಿನಲ್ಲಿರುವಂತೆ ವಿರಾಟ್ ಆಡಬೇಕು ಎಂದು ನಾನು ಕೋರಿಕೊಳ್ಳುತ್ತೇನೆ ಎಂದಿದ್ದಾರೆ.
ಪಾಕ್ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿಗೆ 100 ನೇ ಪಂದ್ಯವಾಗಿದೆ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇಂಡೋ – ಪಾಕ್ ಕದನ ಆಗಸ್ಟ್ 28 ರಂದು ನಡೆಯಲಿದೆ.








