Gargi Movie | ಗಾರ್ಗಿಯಾಗಿ ಗೆದ್ದ ಸಾಯಿ ಪಲ್ಲವಿ
ಟಾಲಿವುಡ್ ನಲ್ಲಿ ಲೇಡಿ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ಸಾಯಿ ಪಲ್ಲವಿ ಗಾರ್ಗಿ ಮೂಲಕ ಗೆಲುವಿನ ಟ್ರ್ಯಾಕ್ ಗೆ ಮರಳಿದ್ದಾರೆ.
ಇದಕ್ಕೂ ಮುನ್ನಾ ಸಾಯಿ ಪಲ್ಲವಿ ನಟಿಸಿದ್ದ ವಿರಾಟ ಪರ್ವಂ ಸಿನಿಮಾ ಥಿಯೇಟರ್ ಅಂಗಳದಲ್ಲಿ ನೆಲಕಚ್ಚಿತ್ತು.
ಗಾರ್ಗಿ ಸಿನಿಮಾ ಜುಲೈ 15 ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಸಿನಿಮಾದಲ್ಲಿ ಮಧ್ಯಮ ವರ್ಗದ ಮಹಿಳೆಯಾಗಿ ಸಂಘರ್ಷ ನಡೆಸುವ ಪಾತ್ರ ಮಾಡಿ ಸಾಯಿ ಪಲ್ಲವಿ ಅವರು ಸೈ ಎನಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸೆಂಟಿಮೆಂಟ್, ಆಕ್ಷನ್ ಎಲ್ಲವೂ ಇದೆ.
ಈ ಸಿನಿಮಾಗೆ ಗೌತಮ್ ರಾಮಚಂದ್ರನ್ ನಿರ್ದೇಶನವಿದೆ.