ಲಾಕ್ ಡೌನ್ ಹಿನ್ನೆಲೆಯಲ್ಲಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದ ಬಿಪಿಎಲ್ ಬಡ ಕುಟುಂಬದವರಿಗೆ ಮುಂದಿನ ಮೂರು ತಿಂಗಳ ಕಾಲ ಕೇಂದ್ರ ಸರ್ಕಾರದಿಂದಲೇ ಉಚಿತವಾಗಿ ಗ್ಯಾಸ್ ನೀಡಲಾಗುವುದು ಎಂದು ಕೇಂದ್ರ ಘೋಷಣೆ ಮಾಡಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕ 80 ಕೋಟಿ ಬಿಪಿಎಲ್ ಕುಟುಂಬಗಳಿಗೆ 3 ತಿಂಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ. 63 ಲಕ್ಷ ಸ್ವಸಹಾಯ ಮಹಿಳಾ ಸಂಘಗಳಿಗೆ ದೀನದಯಾಳ ಉಪಾಧ್ಯಾಯ ಯೋಜನೆಯಡಿ 20 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಇದರಿಂದಾಗಿ 7 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಹಿಂದೆ 10 ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿತ್ತು. ಇದೀಗ ಅದನ್ನು 20 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ 63 ಲಕ್ಷ ಸ್ವಸಹಾಯ ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಶೇಕಡ 24 ರಷ್ಟು ಇಪಿಎಫ್ ಹಣವನ್ನು ಸರ್ಕಾರವೇ ಹಾಕಲಿದೆ. ಮುಂದಿನ ಮೂರು ತಿಂಗಳು ಕೇಂದ್ರ ಸರ್ಕಾರವೇ ಹಣ ಹಾಕಲಿದೆ. ಕಾರ್ಮಿಕರು, ಮಾಲೀಕರ ಪಾಲಿನ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಸಂಘಟಿತ ವಲಯದ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ವೃದ್ಧರು, ವಿಧವೆಯರು, ದಿವ್ಯಾಂಗರಿ 1000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಮೂರು ತಿಂಗಳ ಕಾಲ ಪಿಂಚಣಿ ನೀಡಲು ನಿರ್ಧರಿಸಲಾಗಿದೆ. 3 ಕೋಟಿ ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ಸಿಗಲಿದೆ. ರೈತರ ಖಾತೆಗೆ ತಲಾ 2000 ರೂ ಜಮಾ ಮಾಡಲಾಗುತ್ತದೆ. ಇದರ ಅನುಕೂಲವನ್ನು 8.69 ಕೋಟಿ ರೈತರು ಪಡೆಯಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ನೀಡಲಾಗುತ್ತಿದ್ದ ಹಣವನ್ನು ಏಪ್ರಿಲ್ ಮೊದಲ ವಾರದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ 20 ಕೋಟಿ ಜನ್ ಧನ್ ಖಾತೆಗಳಿಗೆ ತಲಾ 500 ರೂಪಾಯಿ ಜಮಾ ಮಾಡಲಾಗುವುದು.
ಕಾವೇರಿದ ಉಪಚುನಾವಣೆ ಅಖಾಡ; ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ವಾಗ್ದಾಳಿ
ರಾಜ್ಯದ ಉಪಚುನಾವಣೆಯ ರಾಜಕೀಯ ಕಣ ಇದೀಗ ತೀವ್ರ ಕಾವೇರಿದ್ದು, ಕಾಂಗ್ರೆಸ್ ಹಾಗೂ BJP ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ಹಾಲಿ...








