ಮುಂಬಯಿ: ಮಹಾರಾಷ್ಟ್ರ (Maharashtra)ದ ಸಾಂಗ್ಲಿ (Sangli) ಜಿಲ್ಲೆಯ ರಸಗೊಬ್ಬರ ಘಟಕವೊಂದರಲ್ಲಿ ಗ್ಯಾಸ್ ಲೀಕ್ ಆದ ಪರಿಣಾಮ ಮೂವರು ಸಾವನ್ನಪ್ಪಿ, 9 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (MIDC) ತಾರಾಪುರ ಹತ್ತಿರದ ಕಾರ್ಖಾನೆಯಲ್ಲಿ ಗುರುವಾರ (ನ.21) ರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಘಟಕದ ಕಾವಲುಗಾರ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಘಟಕದ ಮಾಲೀಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಗಾಯಗೊಂಡ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ತಾಂತ್ರಿಕ ದೋಷದಿಂದ ರಿಯಾಕ್ಟರ್ ಸ್ಫೋಟಗೊಂಡಿದೆ ಎಂದು ಶಂಕಿಸಿದ್ದಾರೆ.