gas tanker blast
ಮೆಕ್ಸಿಕೊ : ಎಲ್‍ಪಿಜಿ ಕೊಂಡೊಯುತ್ತಿದ್ದ ಡಬಲ್ ಟ್ಯಾಂಕರ್‍ಟ್ರಕ್ ಸ್ಫೋಟಗೊಂಡು ಸ್ಥಳದಲ್ಲಿ 15 ಮಂದಿ ಸಜೀವ ದಹನವಾಗಿರುವ ಭೀಕರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಪಶ್ಚಿಮ ಮೆಕ್ಸಿಕೋದಲ್ಲಿ ಸಂಭವಿಸಿದ ದುರಂತದಲ್ಲಿ 15 ಮಂದಿ ಸಾವನಪ್ಪಿದ್ರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಡುಗೆ ಅನಿಲವಿದ್ದ ಭಾರೀ ಗಾತ್ರದ ಟ್ಯಾಂಕರ್ ಚಾಲಕನ ನಿಯಂತ್ರಣತಪ್ಪಿ ಹೆದ್ದಾರಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಬೆಂಕಿ ತಗುಲಿ ಸ್ಪೋಟನೆಗೊಂಡಿದೆ. ಈ ಘಟನೆಯಿಂದಾಗಿ ಸ್ತಳೀಯರು ಬೆಚ್ಚಿಬಿದ್ದಿದ್ದಾರೆ. ಚಾಲಕ ಸೇರಿದಂತೆ ಟ್ಯಾಂಕರ್‍ನ ಸಮೀಪದಲ್ಲಿದ್ದ ಕೆಲ ವಾಹನಗಳಲ್ಲಿದ್ದ ಸುಮಾರು 15 ಮಂದಿ ಸಜೀವ ದಹನವಾಗಿದ್ದು, ಅವರ ಮೃತದೇಹಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ನಾಲ್ಕು ವಾಹನಗಳು ಸುಟ್ಟು ಹೋಗಿವೆ.
ಟ್ಯಾಂಕರ್‍ಗೆ ಸನಿಹದಲ್ಲಿದ್ದ ಕಾರೊಂದು ಸ್ಫೋಟದ ರಭಸದಕ್ಕೆ ಅನೇಕ ಅಡಿಗಳಷ್ಟು ಮೇಲಕ್ಕೆ ಚಿಮ್ಮಿ ಪಕ್ಕದ ಬೆಟ್ಟಕ್ಕೆ ಅಪ್ಪಳಿಸಿ ಛಿದ್ರ ಛಿದ್ರವಾಗಿದೆ. ಟ್ಯಾಂಕರ್‍ನ ಬಿಡಿ ಭಾಗಗಳು ಬೆಂಕಿ ಉಂಡೆಗಳಾಗಿ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಘಟನೆಯಿಂದಾಗಿ ಸ್ಥಳೀಯ ಜನರು ಅಕ್ಕಪಕ್ಕದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
gas tanker blast
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








