ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ರಶ್ಮಿಕಾಗೆ ಗೇಟ್ ಪಾಸ್..? ಅವರ ಸ್ಥಾನ ಪಡೆದ ಆ ನಟಿ ಯಾರು..!
ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ನಟನೆಯ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಖತ್ ವೈರಲ್ ಆಗಿತ್ತು. ಅಂದ್ಹಾಗೆ ಇಂಡಿಯಾದ ಬಿಗ್ ಡೈರೆಕ್ಟರ್ ಎನಿಸಿಕೊಂಡಿರುವ ಶಂಕರ್ ಜೊತೆಗೆ ರಾಮ್ ಚರಣ್ ಸಿನಿಮಾ ಮಾಡ್ತಾಯಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ಕಾಂಟ್ರವರ್ಸಿ ಕ್ವೀನ್ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗ್ತಿದೆ. ಅಲ್ದೇ ರಶ್ಮಿಕಾ ನಾಯಕಿಯಾಗುವಂತೆ ರಾಮ್ ಚರಣ್ ಅವರೇ ಸ್ವತಃ ಸೂಚಿಸಿದ್ದಾರೆ ಎಂಬ ಸುದ್ದಿಯೂ ಕೂಡ ಹರಿದಾಡಿತ್ತು. ಆದ್ರೆ ಇದೀಗ ಅವರ ಜಾಗಕ್ಕೆ ಮತ್ತೊಬ್ಬ ಖ್ಯಾತ ನಟಿ ರಿಪ್ಲೇಸ್ ಆಗಿದ್ದಾರೆ ಎನ್ನಲಾಗ್ತಿದೆ.
ಹೌದು ರಶ್ಮಿಕಾ ಬದಲಾಗಿ ರಾಮ್ ಚರಣ್ ಗೆ ರಕುಲ್ ಪ್ರೀತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಹೌದು ರಶ್ಮಿಕಾ ಸೈಡ್ ಲೈನ್ ಮಾಡಿ ರಕುಲ್ ಪ್ರೀತ್ ಅವರ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಸಿನಿಮಾಗೆ ದಿಲ್ ರಾಜು ಬಂಡವಾಳ ಹೂಡ್ತಿದ್ದು, ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಸಿನಿಮಾ ಅಣವನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ ಇದೊಂದು ಪ್ಯಾನ್ ಇಂಡಿಯಾ ಹಾಗೂ 3ಡಿ ಸಿನಿಮಾವಾಗಿದ್ದು, ಅಭಿಮಾನಿಗಳ ಕಾತರತೆಯನ್ನ ಮತ್ತಷ್ಟು ಹೆಚ್ಚಿಸಿದೆ. ಇನ್ನೂ ರಾಮ್ ಚರಣ್ ಜೊತೆಗೆ ರಶ್ಮಿಕಾ ನಟಿಸಲಿದ್ದಾರಾ ಅಥವಾ ರಕುಲ್ ಕಾಣಿಸಿಕೊಳ್ಳಲಿದ್ದಾರಾ ಸಿನಿಮಾ ತಂಡ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.