ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Gautam Adani) ಮಹಾಕುಂಭ ಮೇಳದ ( Maha Kumbh Mela) ಇಸ್ಕಾನ್ ಶಿಬಿರದಲ್ಲಿ ಪ್ರಸಾದ ತಯಾರಿಸಿದ್ದಾರೆ.
ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ‘ಮಹಾಪ್ರಸಾದ್ ಸೇವಾ’ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಿದೆ. ಈ ಕುರಿತು ಮಾತನಾಡಿರುವ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆ ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.
ಇಸ್ಕಾನ್, 50 ಲಕ್ಷ ಭಕ್ತರಿಗೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ. ಎರಡು ದೊಡ್ಡ ಅಡುಗೆಮನೆಗಳಲ್ಲಿ ಊಟ ತಯಾರಿಸಿ ಮೇಳದ ಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ವಿತರಿಸಲಾಗುತ್ತಿದೆ. ಪ್ರತಿದಿನ 1 ಲಕ್ಷ ಭಕ್ತರಿಗೆ ಆಹಾರ ನೀಡುವ ನಿರೀಕ್ಷೆಯಿದೆ.








