Gautam Gambhir | ಇದು ಜಡ್ಡು ಅತ್ಯುತ್ತಮ ಇನ್ನಿಂಗ್ಸ್ ಅಲ್ಲ
ಶ್ರೀಲಂಕಾ ವಿರುದ್ಧ ರವೀಂದ್ರ ಜಡೇಜಾ ಅವರ ಪ್ರದರ್ಶನ ಅತ್ಯುತ್ತಮವಾದದ್ದಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು.
ಈ ಪಂದ್ಯದಲ್ಲಿ 175 ರನ್ ಹಾಗೂ 9 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಈ ಪಂದ್ಯದಲ್ಲಿ ಜಡೇಜಾ ಹಲವು ದಾಖಲೆಗಳನ್ನು ಮುರಿದರು.
ಹೀಗಾಗಿ ರವೀಂದ್ರ ಜಡೇಜಾ ಮೇಲೆ ಕ್ರಿಕೆಟ್ ಪಂಡಿತರು ಸೇರಿದಂತೆ ಎಲ್ಲರು ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ.
ಆದ್ರೆ ಇದೀಗ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಜಡೇಜಾ ವಿರುದ್ಧ ಪ್ರಮುಖ ಟೀಕೆಗಳನ್ನು ಮಾಡಿದ್ದಾರೆ.
“ಈ ಪಂದ್ಯದಲ್ಲಿ ಜಡೇಜಾ ಅವರ ಇನ್ನಿಂಗ್ಸ್ ಅದ್ಭುತವಾದದ್ದಲ್ಲ. ಅಂಕಿಅಂಶಗಳ ಕಾರಣದಿಂದಾಗಿ ಅವರ ಇನ್ನಿಂಗ್ಸ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ವಿದೇಶದಲ್ಲಿ ಜಡೇಜಾ ಇದೇ ಇನ್ನಿಂಗ್ಸ್ ಆಡಿದ್ರೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೊಂದುತ್ತಾರೆ.
ಸೆಂಚೂರಿ ಬಳಿಕ ಸ್ಪಿನ್ನರ್ ಗಳಾದ ಧನಂಜಯ ಡಿ ಸಿಲ್ವಾ, ಅಸಲಂಕಾ ಮತ್ತು ಎಂಬೋಲ್ಡೆನಿಯಾ ಬೌಲಿಂಗ್ ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.
ಅದೇ ಜಡೇಜಾ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ನಲ್ಲಿ ಏಳನೇ ಸ್ಥಾನದಲ್ಲಿ ಬಂದ 40 ರನ್ ಇಲ್ಲಾ 50 ರನ್ ಗಳನ್ನು ಗಳಿಸಿದ್ರೆ ಅದು ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿರಲಿದೆ ಎಂದು ಗೌತಿ ಹೇಳಿದ್ದಾರೆ.
ಆದರೆ, ಜಡೇಜಾ ಅತ್ಯುತ್ತಮ ಆಲ್ ರೌಂಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಡ್ಡು ಟಿ 20ಯಲ್ಲಿ ಬಿಗ್ ಹಿಟ್ಟಿಂಗ್ ಮಾಡಬಲ್ಲರು. ಆದರೆ ಇದು ಅವರ ಅತ್ಯುತ್ತಮ ಇನ್ನಿಂಗ್ಸ್ ಅಲ್ಲ ಎಂದು ಗಂಭೀರ್ ವಾದಿಸಿದ್ದಾರೆ.
gautam-gambhir-comments-ravindra-jadeja