Gautam Gambhir | ಡ್ರೆಸ್ಸಿಂಗ್ ರೂಮ್ ನಲ್ಲಿ ಗಂಭೀರ್ ಗರಂ
ಒಂದಲ್ಲಾ ಎರಡಲ್ಲ ಬರೋಬ್ಬರಿ ನಾಲ್ಕಕ್ಕೂ ಹೆಚ್ಚು ಬಾರಿ ಜೀವದಾನ.. ಸಾಕಷ್ಟು ಬಾರಿ ಕಳೆಫೆ ಫೀಲ್ಡಿಂಗ್.. ಕ್ಯಾಚ್ ಹಿಡಿಯೋದಿರ್ಲಿ.. ಬೌಂಡರಿ ತಡೆಯೋದನ್ನ ಕೂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಮರೆತುಬಿಟ್ಟಿದ್ದರು. ಪರಿಣಾಮ ಚೊಚ್ಚಲ ಬಾರಿಗೆ ಪ್ಲೇ ಆಫ್ಸ್ ಪ್ರವೇಶಿಸಿದ್ದ ಲಕ್ನೋ ತಂಡ ಇದೀಗ 15 ನೇ ಆವೃತ್ತಿಯ ಅಭಿಯಾನವನ್ನು ಬರಿಗೈಯಲ್ಲಿ ಮುಗಿಸಿದೆ.
ಹೌದು..! ಕೊಲ್ಕತ್ತಾದ ಈಡರ್ನ್ಸ್ ಗಾಡರ್ನ್ಸ್ ನಲ್ಲಿ ಬುಧವಾರ ಮದಗಜ ಕಾಳಗ ನಡೆಯಿತು. ಎರಡು ಬಲಿಷ್ಠ ತಂಡಗಳು 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಗುದ್ದಾಟ ನಡೆಸಿದ್ವು. ಕೊನೆ ಓವರ್ ವರೆಗೂ ರಣ ರೋಚಕವಾಗಿದ್ದ ಪಂದ್ಯದಲ್ಲಿ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಗಳಿಂದ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ಕೆ.ಎಲ್ ರಾಹುಲ್ ನಾಯಕತ್ವ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಎಲಿಮಿನೇಟ್ ಆದ್ರೆ ಫಾಫ್ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
ಆದ್ರೆ ವಾಸ್ತವಾಗಿ ನೋಡೋದಾದ್ರೆ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಗುಂಡಿಯನ್ನ ತಾನೇ ತೋಡಿಕೊಂಡು ಮಣ್ಣು ಹಾಕಿಕೊಂಡಿದೆ. ಕೈಯಲ್ಲಿ ಜೋಪಾನವಾಗಿದ್ದ ಪಂದ್ಯವನ್ನ ಅತ್ಯಂತ ನಿರ್ಲಕ್ಷದಿಂದ ಕೈ ಚೆಲ್ಲಿದೆ. ಟಾಸ್ ನಿಂದ ಹಿಡಿದು ಮೊದಲ ಪವರ್ ಪ್ಲೇ ವರೆಗೂ ಎಲ್ಲವೂ ಲಕ್ನೋ ತಂಡದ ಪರವಾಗಿತ್ತು. ಎಲ್ಲಾ ಗ್ರಹ ಗತಿಗಳು ಲಕ್ನೋ ತಂಡಕ್ಕೆ ನೆರವಾಗಿದ್ದವು. ಮೊದಲು ಟಾಸ್ ಗೆಲುವು.. ನಂತರ ಫಾಫ್ ಶೂನ್ಯಕ್ಕೆ ಔಟ್ ಹೀಗೆ ಆರಂಭದಲ್ಲಿ ಲಕ್ನೋ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿತ್ತು. ಆದ್ರೆ ನಂತರ ಸ್ವಲ್ಪ ರಿಲ್ಯಾಕ್ಸ್ ಆದ ಲಕ್ನೋ ಕೊನೆಗೆ ಪಂದ್ಯದಲ್ಲಿ ಸೋಲು ಕಂಡಿದೆ.
ಮೊದಲ ವಿಕೆಟ್ ಪತನದ ಬಳಿಕ ಆರ್ ಸಿಬಿ ಮೇಲೆ ಒತ್ತಡ ಹೇರುವಲ್ಲಿ ಲಕ್ನೋ ಬೌಲರ್ ಗಳು ವಿಫಲರಾದ್ರು. ಅದರಲ್ಲೂ ಪಟಿದಾರ್ ಅವರನ್ನ ಕೇವಲವಾಗಿ ತೆಗೆದುಕೊಂಡಿದ್ದು, ಲಕ್ನೋಗೆ ದುಬಾರಿ ಆಯ್ತು. ಕೊನೆಯಲ್ಲಿ ಮಿಸ್ ಫೀಲ್ಡಿಂಗ್ ಕೂಡ ಲಕ್ನೋ ಆಟಗಾರರ ಆತ್ಮವಿಶ್ವಾಸ ಕುಗ್ಗಿಸಿತ್ತು. ಕೊನೆಯ ಐದು ಓವರ್ ಗಳಲ್ಲಿ ಬೌಲರ್ ಗಳು 86 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರು.
ಇನ್ನು ಬ್ಯಾಟಿಂಗ್ ನಲ್ಲಿ ಆರಂಭಿಕರ ಮೇಲೆ ಅವಲಂಭಿತವಾಗಿದ್ದು, ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಅಲ್ಲದೇ ಇತರ ಆಟಗಾರರು ಒತ್ತಡವನ್ನು ರಾಹುಲ್ ಒಬ್ಬರ ಮೇಲೆ ಹಾಕಿದ್ದರು. ಪರಿಣಾಮ ರಾಹುಲ್ ಔಟ್ ಆಗುತ್ತಿದ್ದಂತೆ ಲಕ್ನೋ ತಂಡದ ಸೋಲು ಕೂಡ ಪಕ್ಕಾ ಆಯ್ತು.
ಈ ಹಿನ್ನೆಲೆಯಲ್ಲಿ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಮ್ ನಲ್ಲಿ ಆಟಗಾರರ ಮೇಲೆ ಆಕ್ರೋಶ ಹೊರಗಹಾಕಿದ್ದಾರೆ. ಯಾವುದೇ ಪಂದ್ಯದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಆದ್ರೆ ಪಂದ್ಯವನ್ನ ಬಿಟ್ಟುಕೊಡಬಾರದು. ಇಂದು ನಾವು ಅದನ್ನೇ ಮಾಡಿದ್ದೇವೆ. ನಮ್ಮಷ್ಟಕ್ಕೆ ನಾವೇ ಎದುರಾಳಿಗಳಿಗೆ ಪಂದ್ಯವನ್ನು ಬಿಟ್ಟುಕೊಟ್ಟಿದ್ದೇವೆ. ಮುಖ್ಯವಾಗಿ ಬೌಲಿಂಗ್ ನಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಪ್ರದರ್ಶನ ನೀಡಲೇ ಇಲ್ಲ. ಫೀಲ್ಡಿಂಗ್ ನಲ್ಲಿ ಪದೇ ಪದೇ ಯಡವಟ್ಟುಗಳನ್ನ ಮಾಡಿದ್ದೀರಿ. ಬ್ಯಾಟಿಂಗ್ ನಲ್ಲೂ ಕೂಡ ಸ್ಥಿರ ಆಟವಾಡಿಲ್ಲ. ಇಂಹತ ವರ್ಲ್ಡ್ ಕ್ಲಾಸ್ ಪಂದ್ಯಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಪ್ರತಿ ಹಂತದಲ್ಲೂ ಎಚ್ಚರದಿಂದ ಇರಬೇಕಾಗುತ್ತದೆ.ಆದ್ರೆ ನಾವು ಇಂದು ಸಂಪೂರ್ಣವಾಗಿ ಫೈಲ್ಯೂರ್ ಆಗಿದ್ದೇವೆ ಎಂದು ಗಂಭೀರ್ ಗರಂ ಆಗಿದ್ದಾರೆ.