ಕಾಂಗ್ರೆಸ್ ಸೇರಲಿದ್ದಾರೆ ಗೀತಾ ಶಿವರಾಜ್ ಕುಮಾರ್
ಬೆಂಗಳೂರು : ಗೀತಾ ಶಿವರಾಜಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಧುಬಂಗಾರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ ಅವರ ಬೆಂಬಲಿಗರಾಗಿ ಡಿಕೆಶಿ ಕೆಲಸ ಮಾಡಿದ್ದರು.
ಡಿಕೆಶಿ ಅಧ್ಯಕ್ಷತೆಯಲ್ಲಿ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ.
ಶಿವಕುಮಾರ್ ಅಣ್ಣ ನನಗೆ ಮೊದಲಿನಿಂದಲೂ ಹೇಳುತ್ತಿದ್ದರು. ಈ ದೇಶಕ್ಕೆ ಕಾಂಗ್ರೆಸ್‍ನ ಅವಶ್ಯಕತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿ ನಿಷ್ಟನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸೇರ್ಪಡೆಗೊಳ್ಳಲು ಒಂದು ವರ್ಷ ನಾನು ಸಮಯ ತೆಗೆದುಕೊಂಡೆ.
ಗೀತಾ ಶಿವರಾಜಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ. ಸಂಬಂಧ ಒಂದು ಕಡೆ, ಪಕ್ಷ ಇನ್ನೊಂದೆಡೆ. ಹೀಗಾಗಿ ಕೆಲ ದಿನಗಳಲ್ಲಿ ಗೀತಾ ಕಾಂಗ್ರೆಸ್ ಸೇರ್ತಾರೆ ಎಂದು ಮಾಹಿತಿ ನೀಡಿದರು.
ಇನ್ನು ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಕೂಡ ಬೇಧ ಬಾವ ಮಾಡಿಲ್ಲ. ಡಿಕೆಶಿ ನನಗೆ ಅಣ್ಣನ ತರಹ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.
ಡಿಕೆಶಿ ಅವರು ಬಂಗಾರಪ್ಪ ಅನುಯಾಯಿ. ಹೀಗಾಗಿ ಈಗ ಕಾಂಗ್ರೆಸ್ ಸೇರ್ತಾ ಇದ್ದೇನೆ. ಈಗಿನಿಂದ ನಾನು ಕಾಂಗ್ರೆಸ್ಸಿಗ, ಅಧಿಕೃತ ಆಮೇಲೆ ಆಗ್ತೀನಿ.
ಇವತ್ತು ಕಾಂಗ್ರೆಸ್ ಅವಶ್ಯಕತೆ ದೇಶಕ್ಕೆ,ರಾಜ್ಯಕ್ಕೆ ಇದೆ. ಹಾಗಾಗಿ ಕಾಂಗ್ರೆಸ್ ಸೇರೋಕೆ ಬಂದಿದ್ದೇನೆ ಎಂದು ತಿಳಿಸಿದರು.