ಲಂಕಾ ಪ್ರಿಮಿಯರ್ ಲೀಗ್ ನಲ್ಲಿ `ಜಫ್ರಿ ವಾಂಡರ್ಸ್ ವಂಡರ್’..!! Geoffrey Wanders saaksha tv
ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಕೊಲಂಬೋ ಸ್ಟಾರ್ಸ್ ತಂಡ ಯುವ ಬೌಲರ್ ವಂಡರ್ ಮಾಡಿದ್ದಾರೆ. ಪಂದ್ಯದಲ್ಲಿ ಬರೋಬ್ಬರಿ ಆರು ವಿಕೆಟ್ ಪಡೆಯುವ ಮೂಲಕ ಚರಿತ್ರೆ ನಿರ್ಮಿಸಿದ್ದಾರೆ.
ನಿನ್ನೆ ಕ್ಯಾಂಡಿ ವಾರಿಯರ್ಸ್ ವರ್ಸಸ್ ಕೊಲೊಂಬೋ ಸ್ಟಾರ್ಸ್ ನಡುವೆ ಮ್ಯಾಚ್ ನಡೆಯಿತು. ಈ ಪಂದ್ಯದಲ್ಲಿ ಕೊಲೊಂಬೋ ಸ್ಟಾರ್ಸ್ 58 ರನ್ ಗಳ ಅಂತರದೊಂದಿಗೆ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕ್ಯಾಂಡಿ ವಾರಿಯರ್ಸ್ ನಿಗದಿತ 20 ರನ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ಕುಶಾಲ್ ಪೆರೀರಾ (38 ಎಸೆತ 58 ರನ್, 6 ಫೋರ್‌ಗಳು, 2 ಸಿಕ್ಸರ್‌ಗಳು), ಧನುಂಜಯ್ ಡಿಸಿಲ್ವಾ 40 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಕ್ಯಾಂಡಿ ವಾರಿಯರ್ಸ್ ಜೆಫ್ರಿ ಬೌಲಿಂಗ್ ದಾಳಿಗೆ ನಲುಗಿ 17 ಓವರ್‌ಗಳಲ್ಲಿ 124 ರನ್‌ಗೆ ಆಲೌಟಾಯಿತು.
ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನ ಬೌಲ್ ಮಾಡಿದ ಜೆಫ್ರಿ ಒಂದು ಮೇಡಿನ್ ನೊಂದಿಗೆ 25 ರನ್ ನೀಡಿ ಆರು ವಿಕೆಟ್ ಪಡೆದಿದ್ದಾರೆ.