ಬರ್ಲಿನ್: ಹಮಾಸ್ ಚಟುವಟಿಕೆಗಳ ಮೇಲೆ ಜರ್ಮನಿಯು (Germany) ನಿಷೇಧ ಹೇರಿದೆ. ಇಸ್ರೇಲ್ (Israel) ವಿರೋಧಿ ಹಾಗೂ ಯಹೂದ್ಯ ವಿರೋಧಿ ವಿಚಾರಗಳನ್ನು ಹರಡುತ್ತಿರುವ ಈ ಗುಂಪು ವಿಸರ್ಜಿಸಲು ಆದೇಶ ನೀಡಲಾಗಿದೆ.
ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೈಸರ್, ಇದನ್ನು ನಿಷೇಧ ಹೇರಲಾಗಿದೆ. ಇದನ್ನು ದೇಶದಲ್ಲಿ “ಭಯೋತ್ಪಾದಕ” ಸಂಘಟನೆ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಮಾಸ್ ಅಷ್ಟೇ ಅಲ್ಲ, ಇಸ್ರೇಲ್ ರಾಷ್ಟ್ರವನ್ನು ನಾಶಮಾಡುವ ಗುರಿ ಹೊಂದಿರುವ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಪರಾಧಗಳಲ್ಲಿ ಇಸ್ರೇಲ್‌ನೊಂದಿಗೆ ಜರ್ಮನಿ ಕೂಡ ಪಾಲುದಾರಿಕೆ ಹೊಂದಿದೆ ಎಂಬುದನ್ನು ಈ ನಿರ್ಧಾರ ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಠ 1,400 ಜನ ಹತ್ಯೆಯಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ. ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 3,760 ಮಕ್ಕಳು ಸೇರಿದಂತೆ 9 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.








