ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಜಾಲಕ್ಕೆ ಜರ್ಮನಿ, ಬೆಲ್ಜಿಯಂ, ಬೆಲ್ಜಿಯಂ ನಂಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೊರಿಯರ್ ಮೂಲಕ ಜರ್ಮನಿ, ಡೆನ್ಮಾರ್ಕ್ ಹಾಗೂ ಬೆಲ್ಜಿಯಂನಿಂದ ಡ್ರಗ್ಸ್ ಬೆಂಗಳೂರು ಹಾಗೂ ಮುಂಬೈಗೆ ರವಾನೆ ಆಗುತ್ತಿತ್ತು. ಡಾರ್ಕ್ವೆಬ್ ಮೂಲಕ ಬುಕ್ ಮಾಡಿ ಬೆಂಗಳೂರು ಹಾಗೂ ಮುಂಬೈಗೆ ಡ್ರಗ್ಸ್ ತರಿಸಿಕೊಳ್ಳಲಾಗುತ್ತಿತ್ತು. ಜರ್ಮನಿ, ಬೆಲ್ಜಿಯಂ, ಡೆನ್ಮಾರ್ಕ್ ಮೂಲಕ ತರಿಸಿಕೊಂಡ ಡ್ರಗ್ಸ್ಗೆ ಬಿಟ್ ಕಾಯಿನ್ಗಳ ಮೂಲಕ ಹಣ ಪಾವತಿ ಮಾಡುತ್ತಿರುವುದು ಸಿಸಿಬಿಯ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಡೆನ್ಮಾರ್ಕ್ ಹಾಗೂ ಬೆಲ್ಜಿಯಂನಿಂದ ವಿಮಾನದಿಂದ ಬರುತ್ತಿದ್ದ ಕೊರಿಯರ್ ಬಾಕ್ಸ್ಗಳಲ್ಲಿ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅದೂ ಅಲ್ಲದೆ ಕೆಲ ಮಕ್ಕಳ ಆಟಿಕೆಗಳಲ್ಲಿ ಡ್ರಗ್ಸ್ ತುಂಬಿಸಿ ಕೊರಿಯರ್ ಮಾಡುತ್ತಿದ್ದರು. ಅಂಚೆ ಮೂಲಕವೂ ಡೆನ್ಮಾರ್ಕ್ ಹಾಗೂ ಬೆಲ್ಜಿಯಂನಿಂದ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎಂಬ ವಿಚಾರವೂ ಸಿಸಿಬಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ