ಉಕ್ರೇನ್ ಬೆಂಬಲಕ್ಕೆ ನಿಂತ ಜರ್ಮನಿ | 14 ಶಸ್ತ್ರಸಜ್ಜಿತ ವಾಹನಗಳನ್ನು ನೀಡಿದೆ – Saaksha Tv
ಉಕ್ರೇನ್: ರಷ್ಯಾ ವಿರುದ್ಧ ಉಕ್ರೇನ್ ಹೋರಾಡಲು ಜರ್ಮನಿ 1,000 ಯುದ್ಧ ಟ್ಯಾಂಕರ್ ಗಳನ್ನು ಉಕ್ರೇನ್ ಗೆ ನೀಡಿದೆ.
ಶನಿವಾರ ಸಂಜೆ ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯವು 1,000 ಯುದ್ಧ ಟ್ಯಾಂಕರ್ಗಳನ್ನು ಮತ್ತು 500 ಸ್ಟಿಂಗರ್ಗಳನ್ನು ಉಕ್ರೇನ್ಗೆ ಸಾಧ್ಯವಾದಷ್ಟು ಬೇಗ ರವಾನಿಸುವುದಾಗಿ ಘೋಷಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜರ್ಮನ್ ಓಲಾಫ್ ಸ್ಕೋಲ್ಜ್ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಒಂದು ಮಹತ್ವದ ತಿರುವನ್ನು ಸೂಚಿಸುತ್ತದೆ.ಈ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ಸೈನ್ಯದ ವಿರುದ್ಧ ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳಲು ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್ಗೆ ಸಹಾಯ ಮಾಡಲು ಸಾಕಷ್ಟು ಮಿತ್ರದೇಶಗಳು ಮುಂದೆ ಬಂದಿದ್ದು, ಈಗಾಗಲೇ ಜರ್ಮನಿ ಉಕ್ರೇನ್ ಸೈನಿಕರ ರಕ್ಷಣೆಗೆ 5,000 ಹೆಲ್ಮೆಟ್ಗಳನ್ನು ಕೊಡುಗೆಯಾಗಿ ನೀಡಿದೆ. ಇದಲ್ಲದೆ, ಜರ್ಮನಿ 14 ಶಸ್ತ್ರಸಜ್ಜಿತ ವಾಹನಗಳು ಮತ್ತು 10,000 ಟನ್ಗಳಷ್ಟು ಇಂಧನವನ್ನು ಉಕ್ರೇನ್ಗೆ ಕಳುಹಿಸುವುದಾಗಿ ಹೇಳಿದೆ.
ರಷ್ಯಾದ ದಾಳಿಯಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ್ತವಾಗಿರಬೇಕು. ಹಾಗಾಗಿ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಒದಗಿಸುವಲ್ಲಿ ಫೆಡರಲ್ ಸರ್ಕಾರ ಉಕ್ರೇನ್ಗೆ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಮತ್ತು ಆರ್ಥಿಕ ಸಚಿವ ರಾಬರ್ಟ್ ಹ್ಯಾಬೆಕ್ ಹೇಳಿದ್ದಾರೆ.