ಫೋಸ್ಟ್ ಆಫೀಸ್ ಫ್ರಾಂಚೈಸ್‍ನಿಂದ ಪಡೆದುಕೊಳ್ಳಿ ತಿಂಗಳಿಗೆ 50 ಸಾವಿರ ರೂಪಾಯಿ
ಹೊಸದಿಲ್ಲಿ, ಜುಲೈ 20: ನೀವು ಎಂಟನೆಯ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಪೋಸ್ಟ್ ಆಫೀಸ್ ನಲ್ಲಿ ವ್ಯವಹಾರ ಮಾಡಲು ಉತ್ತಮ ಅವಕಾಶವಿದೆ. ಅಂಚೆ ಕಚೇರಿಯೊಂದಿಗೆ ನೀವು ವ್ಯವಹರಿಸುವುದರಿಂದ ನೀವು ಪ್ರತಿ ತಿಂಗಳು 50 ಸಾವಿರ ರೂಪಾಯಿಗಳ ವರೆಗೆ ಸಂಪಾದಿಸಬಹುದು. ಇಂಡಿಯಾ ಪೋಸ್ಟ್ ನಿಮಗಾಗಿ ಫ್ರ್ಯಾಂಚೈಸ್ ಯೋಜನೆಯನ್ನು ತಂದಿದ್ದು, ಈ ಯೋಜನೆ ಮೂಲಕ ನೀವು ಅಂಚೆ ಕಚೇರಿಯನ್ನು ತೆರೆದು ವ್ಯವಹಾರವನ್ನು ಪ್ರಾರಂಭಿಸಬಹುದು.
ಈ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು?

ನೀವು ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಪಡೆದುಕೊಂಡು ವ್ಯವಹಾರವನ್ನು ಪ್ರಾರಂಭಿಸಿದರೆ, ಪ್ರತಿ ತಿಂಗಳು 50000 ರೂಪಾಯಿಗಳವರೆಗೆ ಆದಾಯ ಗಳಿಸಬಹುದು. ನಗರಗಳು, ಹಳ್ಳಿಗಳು ಮತ್ತು ಪಟ್ಟಣಗಳು ಹೀಗೆ ನೀವು ಎಲ್ಲಿ ಬೇಕಾದರೂ ಅಂಚೆ ಕಚೇರಿಯನ್ನು ತೆರೆಯಬಹುದಾಗಿದೆ. ಅದೇ ಸಮಯದಲ್ಲಿ ಅಂಚೆ ಕಚೇರಿಯ ಫ್ರ್ಯಾಂಚೈಸ್ ಪಡೆಯಲು ನೀವು 5000 ರೂ.ಗಳ ಭದ್ರತಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಯಾರು ಈ ವ್ಯವಹಾರ ಪ್ರಾರಂಭಿಸಬಹುದು?
ಯಾವುದೇ ಭಾರತೀಯ ಪ್ರಜೆ, ಅಂಚೆ ಕಚೇರಿಯ ಫ್ರ್ಯಾಂಚೈಸ್ ಪಡೆದುಕೊಳ್ಳಬಹುದಾಗಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಷ್ಟೇ ಅಲ್ಲ ಫ್ರ್ಯಾಂಚೈಸ್ ಪಡೆದುಕೊಳ್ಳುವ ವ್ಯಕ್ತಿಯು ಮಾನ್ಯತೆ ಪಡೆದ ಶಾಲೆಯಿಂದ ಎಂಟನೇ ತರಗತಿ ಉತ್ತೀರ್ಣರಾಗಿರುವ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು.
ಈ ವ್ಯವಹಾರದಲ್ಲಿ ಹೇಗೆ ಆದಾಯ ಸಂಪಾದಿಸುವುದು?
ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಪಡೆದು ಕೊಂಡ ಬಳಿಕ ನೀವು ನೋಂದಾಯಿತ ಲೇಖನ, ಬುಕಿಂಗ್ ಸ್ಪೀಡ್ ಪೋಸ್ಟ್ ಲೇಖನ, ಮನಿ ಆರ್ಡರ್, ರಿಜಿಸ್ಟ್ರಿ, ಅಂಚೆ ಚೀಟಿ, ಅಂಚೆ ಲೇಖನ ಸಾಮಗ್ರಿಗಳು ಮತ್ತು ಮನಿ ಆರ್ಡರ್ ಫಾರ್ಮ್ ಅನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.
ಫ್ರಾಂಚೈಸಿಗಳಲ್ಲಿ ಎರಡು ವಿಧಗಳಿವೆ:
ಅಂಚೆ ಇಲಾಖೆಯು ಪ್ರಸ್ತುತ ದ್ವಿಮುಖ ಫ್ರಾಂಚೈಸಿಗಳನ್ನು ನೀಡುತ್ತಿದ್ದು, ಮೊದಲನೆಯದು ಔಟ್-ಲೆಟ್ ಫ್ರಾಂಚೈಸಿ ಮತ್ತು ಎರಡನೆಯದು ಅಂಚೆ ಏಜೆಂಟ್ ಫ್ರಾಂಚೈಸಿ. ಈ ಎರಡು ಫ್ರಾಂಚೈಸಿಗಳಲ್ಲಿ ಯಾವುದನ್ನೂ ಪಡೆದುಕೊಳ್ಳಬಹುದಾಗಿದ್ದು, ದೇಶದಾದ್ಯಂತ ಅಂಚೆ ಕಛೇರಿಯ ಅವಶ್ಯಕತೆಯಿರುವ ಅನೇಕ ಸ್ಥಳಗಳಿವೆ. ಅಂಚೆ ಕಛೇರಿಯನ್ನು ಅಲ್ಲಿ ತೆರೆಯಲಾಗದೇ ಇದ್ದ ಸಂದರ್ಭದಲ್ಲಿ, ಜನರಿಗೆ ಸೌಲಭ್ಯಗಳನ್ನು ಒದಗಿಸಲು ಫ್ರ್ಯಾಂಚೈಸ್ ಔಟ್ಲೆಟ್ ತೆರೆಯಲಾಗುತ್ತದೆ. ಇದಲ್ಲದೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆಗೆ ಅಂಚೆ ಚೀಟಿಗಳು ಮತ್ತು ಲೇಖನ ಸಾಮಗ್ರಿಗಳನ್ನು ತಲುಪಿಸುವ ಏಜೆಂಟರ ಅವಶ್ಯಕತೆ ಇದ್ದು, ಇದನ್ನು ಅಂಚೆ ಏಜೆಂಟ್ ಫ್ರ್ಯಾಂಚೈಸ್ ಎಂದು ಕರೆಯಲಾಗುತ್ತದೆ.

ಈ ಫ್ರಾಂಚೈಸಿಗಳನ್ನು ನೀವು ಪಡೆಯಲು ಬಯಸಿದರೆ ನೀವು ಪೋಸ್ಟ್ ಆಫೀಸ್ ಫ್ರಾಂಚೈಸಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಂಡಿಯಾ ಪೋಸ್ಟ್ ನ ಈ ಅಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
https://www.indiapost.gov.in/VAS/DOP_PDFFiles/Franchise.pdf
(https://www.indiapost.gov.in/VAS/DOP_PDFFiles/Franchise.pdf)
ಈ ವೆಬ್ ಸೈಟ್ ನಿಂದ ನೀವು ಅರ್ಜಿಯನ್ನು ಡೌನ್‌ಲೋಡ್ ಮಾಡುವ ಮೂಲಕ ಫ್ರ್ಯಾಂಚೈಸ್ ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರು ಅಂಚೆ ಇಲಾಖೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಬೇಕು. ಆಗ ಮಾತ್ರ ಅವರು ಫ್ರ್ಯಾಂಚೈಸ್ ಪಡೆದು ಗ್ರಾಹಕರಿಗೆ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ.








