ಈ ಬಾರಿಯ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಜಿಯೋ ಸಿನಿಮಾ ಸದ್ಯ ಪ್ರೀಮಿಯಂ ಕಾರ್ಯಕ್ರಮಗಳ ಚಂದಾದಾರಿಕೆಯನ್ನು ಆರಂಭಿಸಿದೆ.
ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ ಚಂದಾದಾರರಾಗಲು ವರ್ಷಕ್ಕೆ 999 ರೂ. ಪಾವತಿಸಬೇಕಾಗಿದ್ದು, ಇಲ್ಲಿಯವರೆಗೆ ಮನರಂಜೆ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಿದ್ದ ಜಿಯೋ ಸಿನಿಮಾ ಈಗ ಇದನ್ನು ನಿಲ್ಲಿಸಲು ಆರಂಭಿಕ ಹೆಜ್ಜೆ ಇಟ್ಟಂತಾಗಿದೆ. ಸದ್ಯ ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ ಮಾತ್ರ ಚಂದಾದಾರಕ್ಕೆ ಹಣ ಪಾವತಿಸಬೇಕಾಗಿದ್ದು, ಮುಂದೆ ಇನ್ನಿತರ ಸೇವೆಗಳ ಮೇಲೆಯೂ ಜಿಯೋ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ








