ಮದುವೆ ಆಸೆ ತೋರಿಸಿ ಕಾಗೆ ಹಾರಿಸಿದಳು ಸುಂದರಿ : ಪ್ರೀತಿ ನಂಬಿ ಪಾಪರ್ ಆದ ಯುವಕ..!
ಉತ್ತರಪ್ರದೇಶ: ಯುವಕನೋರ್ವ ಹುಡುಗಿಯನ್ನ ಮದುವೆಯಾಗುವ ಆಸೆಯಲ್ಲಿ ಆಕೆಯನ್ನ ನಂಬಿ ಇದೀಗ ಪಂಗನಾಮ ಹಾಕಿಸಿಕೊಂಡಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಹೌದು ಈ ಖತರ್ನಾಕ್ ಯುವತಿ ಜೀವನ್ ಸಾಥಿ ಡಾಟ್ ಕಾಂ ಮೂಲಕ ಯುವಕನಿಗೆ ಪರಿಚಯವಾಗಿ ಮದುವೆ ಆಸೆ ತೋರಿಸಿ ಆತನ ಜೇಬು ಖಾಲಿ ಮಾಡಿಸಿ ಪರಾರಿಯಾಗಿದ್ದಾಳೆ.
ಪ್ರಿಯಾಂಕಾ ಸಿಂಗ್ ಎಂಬಾಕೆ ಮನೋಜ್ ಅಗರ್ವಾಲ್ ಎಂಬಾತನಿಗೆ ಪರಿಚಯವಾಗಿದ್ದಾಳೆ. ಬಿಹಾರ್ ಮೂಲದ ಪ್ರಿಯಾಂಕಾ ಸಿಂಗ್ ಡಿಗ್ರಿ ಮಾಡ್ತಿದ್ದಳಂತೆ. ತಂದೆ-ತಾಯಿಯಿಲ್ಲ, ಚಿಕ್ಕಮ್ಮನ ಜೊತೆ ದೆಹಲಿಯಲ್ಲಿದ್ದೇನೆಂದು ಹೇಳಿಕೊಂಡಿದ್ದಳಂತೆ. ಇಬ್ಬರ ಮನೆಯಲ್ಲಿ ಮಾತುಕತೆ ನಡೆಸಿ ಮದುವೆಯನ್ನೂ ಸಹ ಫಿಕ್ಸ್ ಮಾಡಿದ್ದರಂತೆ. ಹಾಗೆಯೇ ಮದುವೆಗೂ ಮುನ್ನ ಇಬ್ಬರೂ ಸುತ್ತಾಡಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ಪ್ರಿಯಾಂಕಾ ಆಗಾಗ ಹಣ ಕೇಳಿದ್ದಾಳೆ.
ಮಗಳು ದಾರಿ ತಪ್ಪಿದ್ದು ನಿಜ… ಆದ್ರೂ ಹೀಗೆ ಮಾಡೋಕೆ ಮನಸ್ಸು ಹೇಗೆ ಬಂತೋ ಈ ಮಹಾತಾಯಿಗೆ..!
ಈ ನೆಪದಲ್ಲಿ ಆತನ ಕೈನಲ್ಲಿದ್ದ 6 ಲಕ್ಷ ರೂಪಾಯಿಯನ್ನು ನುಂಗಿ ನೀರು ಕುಡಿದಿದ್ದಾಳೆ. ಅಷ್ಟೇ ಅಲ್ಲ ಆಗಾಗ ಭೇಟಿಯಾಗ್ತಿದ್ದ ಪ್ರಿಯಾಂಕಾ 2 ಲಕ್ಷ ರೂಪಾಯಿಯಷ್ಟು ಹಣವನ್ನು ಶಾಪಿಂಗ್ ಗೆ ಖರ್ಚು ಮಾಡಿಸಿದ್ದಳಂತೆ. ಆತನ ಬಳಿ ಇದ್ದ ಬದ್ದ ದುಡ್ಡೆಲ್ಲಾ ಖಾಲಿಯಾದ ನಂತರ ಈಕೆ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾಳೆ. ಇದಾದ ಬಳಿಕ ಆಕೆ ಪಾನ್ ಕಾರ್ಡ್ ಕೂಡ ನಕಲಿ ಎಂಬುದು ಮನೋಜ್ ಗೆ ತಿಳಿದಿದ್ದು, ಈ ಸಂಬಂಧ ನನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.
ಮದುವೆ ಮಾಡಪ್ಪ… ಎಂದ ಮಗನನ್ನೇ ಕೊಂದ ತಂದೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel