ಪ್ರೇಯಸಿಗೆ ಆತ್ಮಹತ್ಯೆಗೆ ಐಡಿಯಾ ಕೊಟ್ಟ ಬಾಯ್ ಫ್ರೆಂಡ್ : ಮುಂದೆ ಆಗಿದ್ದೇನು ಗೊತ್ತಾ..?
ಚೆನ್ನೈ: ಸಾಮಾನ್ಯವಾಗಿ ಪ್ರೇಮಿಗಳು ಮನೆಯಲ್ಲಿ ಒಪ್ಪದೇ ಇದ್ದರೆ ಓಡಿ ಹೋಗಿ ಮದುವೆಯಾಗೋದು ಇಲ್ಲ ಆತ್ಮಹತ್ಯೆಗೆ ಶರಣಾಇರೋ ಪ್ರಕರಣಗಳನ್ನ ನಾವು ನೋಡಿದ್ದೇವೆ. ಆದ್ರೆ ಪ್ರಿಯಕರನೇ ಗರ್ಲ್ ಫ್ರೆಂಡ್ ಗೆ ಆತ್ಮಹತ್ಯೆಗೆ ಐಡಿಯಾ ಕೊಟ್ಟಿದ್ದು, ಆಕೆ ವಿಡಿಯೋ ಕಾಲ್ ನಲ್ಲಿ ಇದ್ದಾಗಲೇ ನೇಣಿಗೆ ಶರಣಾಗಿರುವ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಭಾರತಿ ಎಂಬ ಯುವತಿ ಯೋಧನೋರ್ವನನ್ನ ಪ್ರೀತಿ ಮಾಡ್ತಿದ್ದಳು. ಆನ ಲೈನ್ ಮೂಲಕ ಇವರಿಬ್ಬರ ಲವ್ ಸ್ಟಾರ್ಟ್ ಆಗಿತ್ತು. ವಿಡಿಯೋ ಕಾಲಿಂಗ್ ಆಯಪ್ ಒಂದರಲ್ಲಿ ನಾಗ್ಪುರ ಮೂಲದ ಕುಮಾರ್ಸೇನ್ ಎಂಬಾತನೊಂದಿಗೆ ಯುವತಿ ಸ್ನೇಹ ಬೆಳೆಸಿದ್ದಾಳೆ. ನಾಗ್ಪುರ ಮೂಲದ ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಕ್ರಮೇಣ ಇದು ಪ್ರೀತಿಗೆ ತಿರುಗಿತ್ತು. ಇಲ್ಲಿಯ ವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು.
ಹೆಂಡತಿ ಜೊತೆ ಜಗಳ: ಕೋಪ ಕಡಿಮೆ ಮಾಡಿಕೊಳ್ಳಲು ಈ ಭೂಪ ಮಾಡಿದ್ದೇನು ಗೊತ್ತಾ..?
ಆದ್ರೆ ಕುಮಾರ್ ನ. 18ರಂದು ಚೆನ್ನೈಗೆ ಭಾರತಿಯನ್ನು ನೋಡಲೆಂದು ಬಂದಿದ್ದ. ಆದ್ರೆ ಆಗ ಯುವತಿಗೆ ಕುಮಾರ್ಸೇನ್ ಜೀವನದ ಆಘಾತಕಾರಿ ಸುದ್ದಿಯೊಂದು ಗೊತ್ತಾಗಿದೆ. ಕುಮಾರ್ ಸೇನ್ ಗೆ ಈ ಹಿಂದೆಯೇ ಮದುವೆಯಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಮೇಲೆ ಬರಸಿಡಿಲು ಅಪ್ಪಳಿಸಿದೆ. ಮದುವೆ ಅಷ್ಟೇ ಅಲ್ಲ ಆತನಿಗೆ ಈಗಾಗಲೇ 2 ಮಕ್ಕಳೂ ಸಹ ಇದ್ದ ವಿಚಾರ ಗೊತ್ತಾಗಿ ಯುವತಿ ಆಘಾತಕ್ಕೆ ಈಡಾಗಿದ್ದಳು. ಆದ್ರೆ ಆತ ಭಾರತಿಯೊಂದಿಗೆ 2ನೇ ಮದುವೆಯಾಗಲು ಬಯಸಿದ್ದ. ಈ ವಿಚಾರ ಗೊತ್ತಾಗ್ತಿದ್ದಂತೆ 2ನೇ ಮದುವೆಯಾಗಲು ಭಾರತಿ ನಿರಾಕರಿಸಿದ್ದಾಳೆ. ಆದರೆ ಅದಕ್ಕೆ ಕುಮಾರ್ಸೇನ್ ಸುತಾರಾಂ ಒಪ್ಪಿಲ್ಲವಂತೆ. ಇಲ್ಲ ಮದುವೆಯಾಗಲೇಬೇಕೆಂದು ಟಾರ್ಚರ್ ಕೊಟ್ಟಿದ್ದಾನಂತೆ.
ಕುಮಾರ್ ಹುಚ್ಚಾಟದಿಂದಾಗಗಿ ಬೇಸತ್ತಿದ್ದ ಯುವತಿ ಜೀವನಕ್ಕೆ ಫುಲ್ ಸ್ಟಾಪ್ ಇಡುವ ನಿರ್ಧಾರ ಮಾಡಿದ್ದಳು. ಕುಮಾರ್ ಸೇನ್ ಗೆ ವಿಡಿಯೋ ಕಾಲ್ ಮಾಡಿ ಕೈ ಕೊಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದ್ರೆ ಯುವತಿಗೆ ಪ್ರತಿಕ್ರಿಯೆ ನೀಡಿರೋ ಕುಮಾರ್ ನೇಣು ಹಾಕಿಕೊಂಡರೆ ಬೇಗ ಸಾಯುತ್ತೀಯ ಎಂದು ಸಲಹೆ ಕೊಟ್ಟಿದ್ದಾನೆ. ಅದರಂತೆ ಭಾರತಿ ವಿಡಿಯೋ ಕಾಲ್ನಲ್ಲಿರುವುಗಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸದ್ಯ ಕುಮಾರ್ಸೇನ್ ನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








