ಕಲಬುರಗಿ: ಪೊಲೀಸರ ಹಲ್ಲೆಯಿಂದ ಜೈಲಿನಲ್ಲಿ ಪೋಷಕರ ಜತೆ ಇದ್ದ ನಾಲ್ಕು ವರ್ಷದ ಬಾಲಕಿ ಸಾವು ಪ್ರಕರಣ ಕಲಬುರಗಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಲಬುರಗಿ ಜಿಲ್ಲಾಸ್ಪತ್ರೆ ಮುಂಭಾಗ ಬಾಲಕಿ ಪೋಷಕರು 48 ಗಂಟೆ ಬಳಿಕವೂ ಶವ ಇಟ್ಟು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ್ ಹೂಗಾರ್ ಅಮಾನತು ಮಾಡುವವರೆಗೆ ಹೋರಾಟ ನಡೆಸುವುದಾಗಿ ಮೃತ ಬಾಲಕಿ ಪೋಷಕರು ಪಟ್ಟು ಹಿಡಿದ್ದಾರೆ.
ಘಟನೆ ಹಿನ್ನೆಲೆ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಗೆದ್ದವರು ಹಾಗೂ ಸೋತವರು ಪರಸ್ಪತ ಹಲ್ಲೆ ಮಾಡಿಕೊಂಡಿದ್ದರು.
ಆದರೆ, ಹಲ್ಲೆ ಮಾಡಿದವರೇ ಸೋತವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನುವುದು ಹಲ್ಲೆಗೊಳಗಾದ ಜೈನಾಪುರ ಗ್ರಾಮದ ಸಂತೋಷ್ ಮತ್ತು ಕುಟುಂಬದವರ ಆರೋಪ. ಹಲ್ಲೆಗೊಳಗಾದವರನ್ನು ಮಕ್ಕಳು ಸಮೇತ ಜೇವರ್ಗಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸ್ ಲಾಕಪ್‍ನಲ್ಲಿದ್ದ ವೇಳೆ ಪಿಎಸ್‍ಐ ಮಂಜುನಾಥ್ ಹೂಗಾರ್, ಮಹಿಳೆಯರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹಿಳೆ ಜತೆಗಿದ್ದ ನಾಲ್ಕು ವರ್ಷದ ಬಾಲಕಿ ಭಾರತಿಗೂ ಪೆಟ್ಟುಬಿದ್ದಿದೆ. ನಂತರ ಕಷ್ಟಡಿಯಲ್ಲಿದ್ದವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಜೈಲಿಗೆ ಕಳಿಸಲಾಗಿತ್ತು. ಆದರೆ, ಗಾಯಗೊಂಡಿದ್ದ ಬಾಲಕಿ ಶನಿವಾರ ಬೆಳಿಗ್ಗೆಯೇ ಜೈಲಿನಲ್ಲಿ ಮೃತಪಟ್ಟಿದ್ದಾಳೆ.
ಪಿಎಸ್‍ಐ ವಿರುದ್ಧ ಕೊಲೆ ಕೇಸ್ ದಾಖಲಿಸಲು ಪಟ್ಟು
ಜೈಲಿನಲ್ಲಿ ಬಾಲಕಿ ಸಾವಿಗೆ ಪಿಎಸ್‍ಐ ಮಂಜುನಾಥ್ ಹೂಗಾರ್ ಕಾರಣ. ಹೀಗಾಗಿ ಬಾಲಕಿ ಸಾವನ್ನು ಕೊಲೆ ಎಂದು ಪರಿಗಣಿಸಬೇಕು, ಪಿಎಸ್‍ಐ ಮಂಜುನಾಥ್ ಹೂಗಾರ್ ಅವರನ್ನು ವಜಾಗೊಳಿಸುವಂತೆ ಮೃತ ಬಾಲಕಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಮೃತ ಬಾಲಕಿ ಶವವನ್ನು ಕಲಬುರಗಿ ಎಸ್ಪಿ ಕಚೇರಿಗೆ ತೆಗೆದುಕೊಂಡು ಹೋಗಲು ಯತ್ನಿಸಿದರೂ ಪೊಲಿಸರು ಅದಕ್ಕೆ ಅವಕಾಶ ನೀಡಲಿಲ್ಲ. ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆ ಜಿಮ್ಸ್ ಎದುರು ತಡೆದ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ 48 ಗಂಟೆ ಕಳೆದರೂ ಆಸ್ಪತ್ರೆ ಎದುರೇ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಜೈಲಿನಲ್ಲಿ ತಾಯಿ, ರಸ್ತೆಯಲ್ಲಿ ಮಗುವಿನ ಶವ
ನ್ಯಾಯಕ್ಕಾಗಿ ಆಗ್ರಹಿಸಿ ಕುಟುಂಬಸ್ಥರು ರಸ್ತೆಯಲ್ಲಿ ಎರಡು ದಿನಗಳಿಂದ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮೃತ ಬಾಲಕಿ ತಾಯಿ ಜೈಲಿನಲ್ಲಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಪಿಎಸ್ ಐ ಮಂಜುನಾಥ್ ಹೂಗಾರರನ್ನ ಅಮಾನತ್ತು ಮಾಡುವವರೆಗೆ ಅಮಾನತು ಮಾಡುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಾಜಕೀಯ ಕಿತ್ತಾಟದಲ್ಲಿ ಮಾನವೀಯತೆ ಮರೆಯಾಯ್ತೇ ಎಂಬ ಪ್ರಶ್ನೆ ಎದುರಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








