ವಧುದಕ್ಷಿಣೆ ನೀಡದ ಹಿನ್ನೆಲೆ – ವಧು ಕಡೆಯವರಿಂದ
ಮದುವೆಗೆ ನಿರಾಕರಣೆ girl party refuses marry
ಮಿರ್ಜಾಪುರ, ಡಿಸೆಂಬರ್31: ವರದಕ್ಷಿಣೆ ಸ್ವೀಕರಿಸದಿದ್ದರೆ ಮದುಮಗನ ಕಡೆಯವರು ಮದುವೆಯನ್ನು ಮುರಿಯುವ ಬಗ್ಗೆ ಹೆಚ್ಚಾಗಿ ನಾವು ಕೇಳುತ್ತೇವೆ. ಆದರೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಧುವಿನ ಕಡೆಯವರು ವಧುದಕ್ಷಿಣೆ ಸಿಗದ ಹಿನ್ನೆಲೆಯಲ್ಲಿ ಮದುವೆಯಾಗಲು ನಿರಾಕರಿಸಿದ್ದಾರೆ. girl party refuses marry

ಹಾಗಾಗಿ ವರನು ವಧು ಇಲ್ಲದೆ ಬರಿಗೈಯಲ್ಲಿ ಹಿಂತಿರುಗಬೇಕಾಯಿತು. ಪೊಲೀಸರು ಎರಡೂ ಕಡೆಯವರ ನಡುವೆ ಮಾತುಕತೆ ನಡೆಸಿ ಲಿಖಿತ ಒಪ್ಪಂದ ಮಾಡಿಸಿಕೊಂಡರು. ಇದು ವಿಚಿತ್ರ ಪ್ರಕರಣ ಮಾತ್ರವಲ್ಲ, ಬಡತನದಲ್ಲಿರುವ ಹೆಣ್ಣನ್ನು ಮಾರಾಟ ಮಾಡುವ ಪ್ರಕರಣವೂ ಆಗಿದೆ. ಈ ಸಂದರ್ಭದಲ್ಲಿ, ದಲ್ಲಾಳಿ ವಧುದಕ್ಷಿಣೆಯ ಮೊತ್ತದೊಂದಿಗೆ ಪರಾರಿಯಾಗಿದ್ದಾನೆ.
ಮಧುರಾ ಜಿಲ್ಲೆಯಲ್ಲಿ ಮದಿಹಾನ್ ಪ್ರದೇಶದಲ್ಲಿನ ಹೆಣ್ಣಿಗೆ ವಿವಾಹವನ್ನು ನಿಗದಿಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ, ಮಥುರಾದಿಂದ ವರನ ಕಡೆಯ ಜನರು ಮದುವೆಯಾಗಲು ಇಲ್ಲಿಗೆ ಬಂದಿದ್ದರು. ರಾಜ್ಗಢ ದ ಗಾರ್ದಾ ಬಾಬಾ ದೇವಸ್ಥಾನದಲ್ಲಿ ಮದುವೆ ನಡೆಯಬೇಕಿತ್ತು.
2021 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಂದರ್ಶಕರ ಸಂಖ್ಯೆ ಕಡಿತ
ಮದುವೆಗೆ ವಧುದಕ್ಷಿಣೆಯಾಗಿ ಒಂದು ಲಕ್ಷ ರೂ ಹಣವನ್ನು ವರನು ಕೊಡಲು ಒಪ್ಪಿದ. ಆದರೆ ಆತ ಆ ಹಣವನ್ನು ವಧುವಿನ ಮನೆಯವರಿಗೆ ನೀಡುವ ಬದಲು ಅದನ್ನು ಬ್ರೋಕರ್ಗೆ ಕೊಟ್ಟನು. ಆತನು ಆ ಹಣದಿಂದ ಮದುವೆಯ ದಿನ ಪರಾರಿಯಾಗಿದ್ದಾನೆ. ಆದ್ದರಿಂದ, ನಿಗದಿತ ಮೊತ್ತವನ್ನು ಪಡೆಯದ ಕಾರಣ, ವಧುವಿನ ಕಡೆಯ ಜನರು ಮದುವೆಯಾಗಲು ನಿರಾಕರಿಸಿದರು.

ಎರಡೂ ಕಡೆಯ ಜನರು ರಾಜಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಥುರಾದಿಂದ ಬಂದವರು ಹಿಂತಿರುಗಿ ಹೋದರು.
ದಲ್ಲಾಳಿಗಳು ಈ ಪ್ರದೇಶದ ಬಡ ಮತ್ತು ಕಡಿಮೆ ವಿದ್ಯಾವಂತ ವಿಭಾಗಗಳಲ್ಲಿ ಹಣವನ್ನು ಪಡೆದು ಮದುವೆ ಮಾಡುವುದರಲ್ಲಿ ಸಕ್ರಿಯರಾಗಿದ್ದಾರೆ. ಪೋಷಕರು ತಮ್ಮ ಹೆಣ್ಣು ಮಗಳನ್ನು ಒಂದು ರೀತಿಯಲ್ಲಿ ಬಲವಂತವಾಗಿ ಮಾರಾಟ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1343969338752000000?s=19
https://twitter.com/SaakshaTv/status/1343969807620706304?s=19








