ಅಗರ್ತಲಾ: ಶಾಲೆ ಮುಗಿಸಿ ಮರಳಿ ಮನೆಗೆ ಬರುತ್ತಿದ್ದ 5ನೇ ತರಗತಿ ಬಾಲಕಿ ಮೇಲೆ ಕಾಮುಕರ ಗ್ಯಾಂಗ್ ವೊಂದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ತ್ರಿಪುರಾದ ದಕ್ಷಿಣಭಾಗದ (Tripura South District) ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಿಂದ ಮಗಳು ಬಾರದಿದ್ದಾಗ ಗಾಬರಿಗೊಂಡ ಪಾಲಕರು ಹುಡುಕಾಟ ನಡೆಸಿದ್ದಾರೆ. ಮಗಳು ಸಿಗದಿದ್ದಾಗ ತ್ರಿಪುರಾದ ಬೆಲೊನಿಯಾ ಮಹಿಳಾ ಪೊಲೀಸ್ (Belonia Women Police Station) ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಂತ್ರಸ್ತ ಬಾಲಕಿಯ ಮನೆ ಹತ್ತಿರದಲ್ಲಿ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಲಕಿಯ ಪರಿಚಯಸ್ಥನೊಬ್ಬ ಮನೆ ಬಳಿ ಬಿಟ್ಟು ಹೋಗಿದ್ದಾನೆಂಬುವುದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದಾರೆ.