ಲಕ್ನೋ: ಅಪ್ಪನನ್ನು ಮಗಳು ಇಷ್ಟ ಪಡುವಷ್ಟು ಬೇರಾರು ಇಷ್ಟ ಪಡಲು ಸಾಧ್ಯವಿಲ್ಲ. ಮಗಳ ಪ್ರೀತಿ ಅದ್ಭುತಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಯೊಬ್ಬ ಮಗಳು ತನ್ನ ಮೇಲಿಟ್ಟಿದ್ದ ಪ್ರೀತಿಯಿಂದಲೇ ಮುಖ್ಯಮಂತ್ರಿಯ ಮನಸ್ಸು ಕರಗಿಸಿ ಬಿಡುಗಡೆಯಾಗಿ ಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಖುರ್ಜಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಪಟಾಕಿ ಮಾರಾಟ ಮಾಡುತ್ತಿದ್ದ. ಉತ್ತರ ಪ್ರದೇಶ ರಾಜ್ಯದಲ್ಲಿ ಪಟಾಕಿ ಬ್ಯಾನ್ ಮಾಡಿದ್ದರೂ ಅದರ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.
ಅAಗಡಿಯಿAದ ಆತನನ್ನು ಎಳೆದುಕೊಂಡು ಪೊಲೀಸ್ ಜೀಪಿನತ್ತ ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ಅಂಗಡಿಯಲ್ಲಿದ್ದ ಮಗಳು ಅಪ್ಪನನ್ನು ಅರೆಸ್ಟ್ ಮಾಡಬೇಡಿ ಎಂದು ಗೋಳಾಡಿದ್ದಾಳೆ.

ದಾರಿಯುದ್ದಕ್ಕೂ ತನ್ನ ತಂದೆಯನ್ನು ಪೊಲೀಸರ ಕೈಯಿಂದ ಬಿಡಿಸುವ ಪ್ರಯತ್ನವನ್ನು ಬಾಲಕಿ ಮಾಡಿದ್ದಾಳೆ. ಆತನನ್ನು ಪೊಲೀಸರು ಬಾಲಕಿಯ ತಂದೆಯನ್ನು ಜೀಪಿನೊಳಗೆ ಹತ್ತಿಸುತ್ತಿದ್ದಂತೆ ಆಕೆಯ ತಾಳ್ಮೆ ಕಳೆದುಕೊಂಡ ಬಾಲಕಿ ಚಾಲಕನ ಬಳಿ ಓಡಿದ್ದಾಳೆ.
ನನ್ನ ತಂದೆಯನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾಳೆ. ಅವರು ಆಗುವುದಿಲ್ಲ ಎಂದಾಗ ಅದೇ ಜೀಪಿಗೆ ತಲೆ ಚಚ್ಚಿಕೊಂಡಿದ್ದಾಳೆ. ಆದಕ್ಕೂ ಮನನ್ಸು ಕರಗದ ಪೊಲೀಸರು ಬಾಲಕಿಯನ್ನು ದೂರಕ್ಕೆ ಸರಿಸಿ, ಜೀಪಿನಲ್ಲಿ ತಂದೆಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು.

ಈ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಷ್ಟರ ಮಟ್ಟಿಗೆ ವಿಡಿಯೋ ಹರಿದಾಡಿದೆ ಅಂದರೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರೂ ಕೂಡ ವಿಡಿಯೋ ನೋಡಿ ಮನಃ ಮರುಗಿದ್ದಾರೆ.

ವಿಡಿಯೋದಲ್ಲಿರುವ ಬಾಲಕಿಗೆ ತಂದೆಯ ಮೇಲಿರುವ ಪ್ರೀತಿಯನ್ನು ನೋಡಿ ಕರಗಿರುವ ಸಿಎಂ ಯೋಗಿ ಆದಿತ್ಯನಾಥ್, ಬಾಲಕಿಯ ತಂದೆಯನ್ನು ಬಿಡುಗಡೆ ಮಾಡಿ ಎಂದು ಪೋಲಿಸರಿಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಆ ಮಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನೂ ಕಳುಹಿಸಿಕೊಟ್ಟಿದ್ದಾರೆ.
ಕೇವಲ ಸಿಎಂ ಮಾತ್ರವಲ್ಲ, ಬಾಲಕಿಯ ತಂದೆಯನ್ನು ಬಂಧಿಸಿದ್ದ ಪೊಲೀಸರು ಸಹ ಆಕೆಯ ಮನೆಗೆ ಬಂದು ಸಿಹಿ ನೀಡಿ ದೀಪಾವಳಿ ಆಚರಿಸಿದ್ದಾರೆ.
( ಏಜೆನ್ಸಿಸ್ )
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








