ಬಾಯ್ ಫ್ರೆಂಡ್ ನಂಬಿ ಬಕ್ರಾ ಆದ ಯುವತಿ : ಮನೆ ಕೀ ಕೊಟ್ಟು ಮೋಸ ಹೋದ್ಲು..!
ಪ್ರೀತಿಸಿದ ಬಾಯ್ ಫ್ರೆಂಡ್ ನ ನ ನಯವಾದ ಮಾತುಗಳನ್ನ ನಂಬಿ ಯುವತಿಯೊಬ್ಬಳು ಪಂಗನಾಮ ಹಾಕಿಸಿಕೊಂಡಿರೋ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಬಾಯ್ ಫ್ರೆಂಡ್ ಗೆ ಈ ಯುವತಿ ತಮ್ಮ ಮನೆಯ ಡ್ಯೂಪ್ಲಿಕೆಟ್ ಕೀ ನೀಡಿದ್ದಳಂತೆ. ಆದ್ರೆ ಆತ ಕೀ ಸಿಕ್ಕ ಬಳಿಕ ಮನೆಯವರಿಲ್ಲದ ಸಮಯಕ್ಕಾಗಿ ಹೊಂಚು ಹಾಕುತ್ತಾ ಕಾಯ್ತಿದ್ದಂತೆ. ಆ ದಿನ ಬಂದ ತಕ್ಷಣ ಮನೆಯಲ್ಲಿದ್ದ ಬರೋಬ್ಬರಿ 13 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿ ಎಸ್ಕೇಪ್ ಆಗಿದ್ದಾನೆ. ಇತ್ತ ಪ್ರಿಯತಮೆ ಕುಟುಂಬಸ್ಥರ ಜೊತೆಗೆ ಟ್ರಿಪ್ ಮುಗಿಸಿ ಮನೆಗೆ ವಾಪಸ್ಸಾದಾಗ ಆಕೆಗೆ ದೊಡ್ಡ ಆಘಾತವಾಗಿದೆ.
ಸುಶಾಂತ್ ಸಾವು ಪ್ರಕರಣ: ಸಹಾಯಕ ನಿರ್ದೇಶಕ ರಿಷಿಕೇಶ್ ಪವಾರ್ ಬಂಧನ
ಮೊದಲಿಗೆ ಯುವತಿ ಮನೆಯವರು ಫ್ಯಾಮಿಟಿ ಟ್ರಿಪ್ ಪ್ಲಾನ್ ಮಾಡಿದ್ದಾರೆ. ಆದ್ರೆ ಆಗ ಆಕೆ ಟ್ರಿಪ್ ಗೆ ಬರುವುದಿಲ್ಲವೆಂದಿದ್ದಾಳೆ. ತನ್ನ ಪ್ರಿಯತಮನೊಂದಿಗೆ ಕಾಲ ಕಳೆಯಬಹುದೆಂಬ ಯೋಜನೆಯಲ್ಲಿ ತಾನು ಬರೋದಿಲ್ಲ ನೀವು ಹೋಗಿ ಬನ್ನಿ ಅಂದಿದ್ದಾಳೆ. ಆದ್ರೆ ಆಕೆಯನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಲು ಒಪ್ಪದ ಆಕೆಯ ತಂದೆ ಕೊನೆಗೂ ಅವಳನ್ನ ಟ್ರಿಪ್ ಗೆ ಕರೆದೊಯ್ದಿದ್ದಾರೆ.
ಇದೇ ಸಮಯದಲ್ಲಿ ಈ ಐನಾತಿ ಆರೋಪಿ ಪ್ರಿಯತಮೆಯ ಮನೆಯನ್ನ ಗುಡುಸಿ ಗುಂಡಾಂತರ ಮಾಡಿದ್ದಾನೆ. ಟ್ರಿಪ್ ನಿಂದ ವಾಪಸ್ ಬಂದ ನಂತರ ಕುಟುಂಬಸ್ಥರು ಈ ಸಂಬಂಧ ಕೊಲಾಬಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ವೇಳೆ ಪೋಷಕರು ತಮ್ಮ ಮಗಳ ಮೇಲೆಯೇ ಅನುಮಾನಪಟ್ಟಿದ್ದಾರೆ. ಆಕೆ ಟೂರ್ ಗೆ ಬರಲು ಒಪ್ಪದಿರೋದೇ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಆಕೆ ಬಾಯ್ ಫ್ರೆಂಡ್ ಗೆ ಕೀ ಕೊಟ್ಟ ವಿಚಾರ ಬಾಯ್ಬಿಟ್ಟಿದ್ದಾಳೆ. ಇದೀಗ ಪರಾರಿಯಾಗಿರುವ ಪ್ರಿಯತಮನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








