ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಕೋವಿಡ್ ಪಾಸಿಟಿವ್
ಸಿಡ್ನಿ : IPL ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಒನ್ ಆಫ್ ದ ಫೇವರೇಟ್ ಆಟಗಾರ ಎನಿಸಿಕೊಂಡಿರುವ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ.. ಬಿಗ್ ಬಾಶ್ ಲೀಗ್ ನಲ್ಲಿ ಆಡುತ್ತಿರುವ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ..
ಸದ್ಯ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಶ್ ಟಿ20 ಲೀಗ್ ನಡೆಯುತ್ತಿದೆ. ಮಾಕ್ಸಿ, ಮೆಲ್ಬರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. ನಿನ್ನೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಿದ ವೇಳೆ ಪಾಸಿಟಿವ್ ವರದಿಯಾಗಿದೆ..
ಇದೀಗ RTPCR ವರದಿಗಾಗಿ ಕಾಯುತ್ತಿದ್ದೇವೆ ಎಂದು ಮೆಲ್ಬರ್ನ್ ಸ್ಟಾರ್ಸ್ ತಂಡ ಸ್ಪಷ್ಟಪಡಿಸಿದೆ.
ಮಾಕ್ಸ್ ವೆಲ್ ಸದ್ಯ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನೂ ಈ ಮೂಲಕ ಬಿಗ್ ಬ್ಯಾಶ್ ಟಿ20 ಲೀಗ್ ನಲ್ಲಿ ಆಡುತ್ತಿರುವ ಮೆಲ್ಬರ್ನ್ ಸ್ಟಾರ್ಸ್ ತಂಡದ ಒಟ್ಟು 13 ಜನ ಆಟಗಾರರಲ್ಲಿ ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈಗಾಗಲೇ ಬ್ರಿಸ್ಬೇನ್ ಹೀಟ್ ತಂಡ ಸೇರಿದಂತೆ ಹಲವು ತಂಡದ ಆಟಗಾರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಬಿಗ್ಬಾಶ್ ಲೀಗಿನಮೂರು ಪಂದ್ಯಗಳನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಇದೀಗ ಆತಂಕ ಹೆಚ್ಚುತ್ತಲೇ ಇರೋದು ನೋಡಿದ್ರೆ, ಲೀಗೇ ರದ್ದಾಗುವಂತೆ ಕಾಣ್ತಿದೆ..








