ಜಾರಿ ಬಿದ್ದು ಕಾಲುಮುರಿದುಕೊಂಡ ಗ್ಲೆನ್ ಮ್ಯಾಕ್ಸ್ ವೆಲ್..
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಜಾರಿಬಿದ್ದು ಕಾಲು ಮುರಿದುಕೊಂಡಿದ್ದಾರೆ. ಈ ಕಾರಣದಿಂದ ಮುಂದಿನ ವಾರದಿಂದ ಶುರುವಾಗಲಿರುವ ವೆಸ್ಟ್ ಇಂಡೀಸ್ ಸರಣಿಯಿಂದ ಹಿಂದೆ ಸರಿದಿದ್ದಾರೆ.
ವರದಿಯ ಪ್ರಕಾರ, 34 ವರ್ಷದ ಮ್ಯಾಕ್ಸ್ ವೆಲ್ ಶನಿವಾರ ರಾತ್ರಿ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋಗಿದ್ದು, ಮನೆಯ ಹಿಂಬದಿಯಲ್ಲಿ ಓಡುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ಮೆಲ್ಬೋರ್ನ್‌ನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ವಿಶ್ವಕಪ್ ನಿಂದ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಮ್ಯಾಕ್ಸ್ ವೆಲ್ ಕೂಡ ಪಂದ್ಯಗಳಲ್ಲಿ ಮಿಂಚಿರಲಿಲ್ಲ. ನಾಲ್ಕು ಇನ್ನಿಂಗ್ಸ್ ಗಳಿಂದ ಒಂದು ಅರ್ಧ ಶತಕ ಸೇರಿದಂತೆ ಕೇವಲ 118 ರನ್ ಗಳಿಸಿದ್ದರು.
ಆಸ್ಟ್ರೇಲಿಯಾ ನವೆಂಬರ್ 30 ರಿಂದ ಟೆಸ್ಟ್ ಸರಣಿಯ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
Glenn Maxwell: Glenn Maxwell slipped and broke his leg.