ಉಕ್ರೇನ್ ಬಿಕ್ಕಟ್ಟು – ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ ??
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತದ ಮೇಲೂ ಇದರ ಪ್ರಭಾವ ಬೀಳಲಿದ್ದು ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಯುದ್ಧದ ಕಾರಣಕ್ಕೆ ಜಾಗತಿಕ ತೈಲ ದರವು ಎಂಟು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದು, 1 ಬ್ಯಾರೆಲ್ಗೆ 110 ಅಮೆರಿಕನ್ ಡಾಲರ್ ದಾಟಿದೆ. ಜಾಗತೀಕ ಪೆಟ್ರೋಲ್ ಉತ್ಪಾದನೆಯ ಶೇಕಡ 10% ರಷ್ಯಾದಿಂದಲೇ ಉತ್ಪಾದನೆಯಾಗುವ ಕಾರಣ ದರ ಪ್ರಭಾವ ವಿಶ್ವದ ಮೇಲೆ ಬೀರಲಿದೆ.
ಸಧ್ಯ ನಮ್ಮ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ ಎನ್ನಲಾಗುತ್ತಿದೆ. ಚುನಾವಣೆಯ ಫಲಿತಾಂಶ ಮಾರ್ಚ್ 10 ರಂದು ಬರಲಿದೆ. ಚುನಾವಣಾ ಫಲಿತಾಂಶದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುವ ಸಾಧ್ಯೆತೆ ಇದೆ.
ಬೆಂಗಳೂರಿನಲ್ಲಿ ಈ ವರ್ಷದಿಂದ ಆರಂಭದಿಂದಿ ಇಂಧನಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100.58 ರೂ ಇದೆ. ಡೀಸೆಲ್ ಬೆಲೆ 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.








