ಜಗ್ಗಲ್ಲ, ಬಗ್ಗಲ್ಲ, ಮೇಕೆದಾಟು ಮಾಡೇ ಮಾಡ್ತೀವಿ : ಜಿ.ಎಂ.ಸಿದ್ದೇಶ್ವರ್
ದಾವಣಗೆರೆ : ನಾವು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಯಾರೇ ಪ್ರತಿಭಟನೆ ಮಾಡಲಿ ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದ್ದಾರೆ.
ಮೇಕೆದಾಟು ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಜಿ.ಎಂ.ಸಿದ್ದೇಶ್ವರ್, ಈ ವಿಚಾರವಾಗಿ ಈಗಾಗಲೇ ಸಿಎಂ ನಿರ್ಧಾರ ಮಾಡಿದ್ದಾರೆ. ಮೇಕೆದಾಟು ಮಾಡೇ ಮಾಡುತ್ತೇವೆ. ನಾವು ಯಾರಿಗೂ ಜಗ್ಗಲ್ಲ ಬಗ್ಗಲ್ಲ.ನಮ್ಮ ನಾಡಿನ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಮೇಕೆದಾಟು ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಮಾತನಾಡಿ, ನಾನು ಹೆಸರು ಬದಲಾವಣೆಗೆ ವಿರೋಧ ಮಾಡಲ್ಲ. ಕ್ಯಾಂಟಿನ್ ಹೆಸರಿನಲ್ಲಿ ನಾನಾ ರೀತಿಯಲ್ಲಿ ವಿರೋಧ ಆಗುತ್ತಿದೆ. ಇಂದಿರಾ ಗಾಂಧಿ ನಮ್ಮ ದೇಶದ ಲೀಡರ್ ಆಗಿದ್ದವರು. ದೇಶದ ಪ್ರಧಾನಿಯಾಗಿ ಹತ್ತು ಹದಿನೈದು ವರ್ಷ ಆಡಳಿತ ಮಾಡಿದವರಾಗಿದ್ದಾರೆ. ವಾಜಪೇಯಿ, ಇಂದಿರಾ ಗಾಂಧಿ ಆಡಳಿತ ಅಲ್ಲಗೆಳೆಯಲು ಆಗಲ್ಲ. ಆದ್ದರಿಂದ ಈ ಬಗ್ಗೆ ನಾನು ವಿರೋಧ ಮಾಡಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.









