ಬಳ್ಳಾರಿ : ಪರಿಣಿತರ ಅಧ್ಯಯನಗಳು ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗಬಹುದು ಅಂತಾ ಹೇಳಿವೆ. ಹೀಗಾಗಿ ಸಣ್ಣ ನೆಗಡಿ ಜ್ವರ ಇದ್ರೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಐಎಲ್‌ಐ ಇರುವವರು, 60 ವರ್ಷ ಮೇಲ್ಪಟ್ಟವರಿಗೆ ಇತರೆ ಕಾಯಿಲೆ ಇದ್ರೆ ಕೊರೊನಾ ಬೇಗ ಆವರಿಸಿಕೊಳ್ಳುತ್ತೆ. ಬೇಸಿಗೆಯಿಂದ ಮಳೆಗಾಲಕ್ಕೆ ಬಂದಿದ್ದೀವಿ. ಮಳೆಗಾಲದಲ್ಲಿ ಸಾಮಾನ್ಯ ಜ್ವರನೂ ಬರುತ್ತೆ. 97% ಯಾವುದೇ ರೋಗದ ಲಕ್ಷಣಗಳು ಕರ್ನಾಟಕದಲ್ಲಿ ಇಲ್ಲ. ಆದ್ರೆ ಐಎಲ್‌ಐ ರೋಗಲಕ್ಷಣ ಇರುವವರನ್ನು ರಕ್ಷಣೆ ಮಾಡಬೇಕು. ಐಎಲ್ ಐ ಕಾಯಿಲೆ ಇರುವವರು ಬೇಗೆ ಚಿಕಿತ್ಸೆ ಪಡೆಯದಿದ್ದರೆ ಸಾವಿಗೀಡಾಗುತ್ತಾರೆ. ಹೀಗಾಗಿ ಅವರನ್ನು ಪ್ರತ್ಯೇಕ ಮಾಡಿ ರಕ್ಷಣೆ ಮಾಡಬೇಕಾಗಿದೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಇದು ಅಪಾಯದ ಮುನ್ಸೂಚನೆ ಎನ್ನುವುದಕ್ಕಿಂತ ಸದ್ಯದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು. ಪರಿಣಿತರ ಅಧ್ಯಯನಗಳು ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಾಗಬಹುದು ಎಂದು ಹೇಳಿವೆ. ಹೀಗಾಗಿ ಸಣ್ಣ ನೆಗಡಿ ಜ್ವರ ಬಂದರೂ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಬೇಕು ಎಂದು ಹೇಳಿದರು.








