ಗೋವಾ ಮತ್ತು ಉತ್ತರಾಖಂಡ ಇಂದು ಮೊದಲ ಹಂತದ ಚುನಾವಣೆ Saaksha Tv
ವಿಧಾನಸಭಾ ಚುನಾವಣೆ 2022: ಇಂದು ಗೋವಾ ಮತ್ತು ಉತ್ತರಾಖಂಡ ಮೊದಲ ಹಂತದ ಮತದಾನ ನಡೆಯುತ್ತಿದೆ.
ಗೋವಾದಲ್ಲಿ 40 ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು. ಮತ್ತು ಉತ್ತರಾಖಂಡದಲ್ಲಿ 70 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕರಾವಳಿ ರಾಜ್ಯ ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಗೆ 301 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇನ್ನೂ 81 ಲಕ್ಷ ಮತದಾರರನ್ನು ಹೊಂದಿರುವ ಉತ್ತರಾಖಂಡದಲ್ಲಿ 152 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 632 ಅಭ್ಯರ್ಥಿಗಳು 70 ಸ್ಥಾನಗಳಿಗೆ ಸ್ಪರ್ಧಾಕಣದಲ್ಲಿದ್ದಾರೆ.
ಇಂದಿನ ಮತದಾನದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಮೊದಲಾದವರು ಪ್ರಮುಖವಾಗಿ ಸ್ಪರ್ಧಾ ಕಣದಲ್ಲಿದ್ದಾರೆ.
ಇಂದಿನ ಚುನಾವಣೆ ಆಡಳಿತಾರೂಢ ಬಿಜೆಪಿಗೆ ಹಾಗೂ ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಚುನಾವಣಾ ಪ್ರಚಾರದಲ್ಲಿ ಮೋದಿ ಸರ್ಕಾರದ ಮತ್ತು ಬಿಜೆಪಿಯ ಯೋಜನೆಗಳನ್ನು ಟೀಕಿಸುತ್ತಾ ಬಂದಿರುವ ಕಾಂಗ್ರೆಸ್, ಆಪ್ ಸೇರಿದಂತೆ ಇತರ ವಿರೋಧ ಪಕ್ಷಗಳಿಗೆ ಇಂದಿನ ಮತದಾನದಲ್ಲಿ ಮತದಾರರು ಯಾವ ರೀತಿ ಒಲವು ವ್ಯಕ್ತಪಡಿಸಲಿದ್ದಾರೆ ಎಂಬುದು ಮುಖ್ಯವಾಗಿದೆ.