Goa Election ರಾಹುಲ್ ಗಾಂಧಿ ಮೋದಿ ಫೋಬಿಯಾ ವಿರುದ್ಧ ಹೋರಾಡುತ್ತಿದ್ದಾರೆ – ಅಮಿತ್ ಶಾ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಗೋವಾ ತಲುಪಿದ್ದಾರೆ. ಈ ವೇಳೆ ಬೋರಿಮ್ನ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅವರೊಂದಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಉಪಸ್ಥಿತರಿದ್ದರು.
ಗೋವಾ ಪ್ರವಾಸದ ವೇಳೆ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ್ದರು. ರಾಹುಲ್ ಮೋದಿ ಫೋಬಿಯಾದೊಂದಿಗೆ ಹೋರಾಡುತ್ತಿದ್ದಾರೆ ಎಂದು ಹೇಳಿದರು. ಬೇರೆ ರಾಜಕೀಯ ಪಕ್ಷಗಳೂ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿವೆ, ಆದರೆ ಬಿಜೆಪಿ ಮಾತ್ರ ಇಲ್ಲಿ ಗೆದ್ದು ಅಭಿವೃದ್ಧಿಗೆ ಮುಂದಾಗುತ್ತದೆ ಎಂದರು.
#WATCH गोवा: केंद्रीय गृह मंत्री अमित शाह ने बोरिम के साईं बाबा मंदिर में पूजा की। इस दौरान उनके साथ मुख्यमंत्री प्रमोद सावंत भी मौजूद रहे। pic.twitter.com/6HE66Jiwsx
— ANI_HindiNews (@AHindinews) January 30, 2022
ಪೊಂಡಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಗೋವಾದಲ್ಲಿ ಬಿಜೆಪಿ ಅಭಿವೃದ್ಧಿ ತಂದಿದೆ. ಗಾಂಧಿ ಕುಟುಂಬಕ್ಕೆ ಗೋವಾ ಕೇವಲ ರಜೆಯ ತಾಣವಾಗಿದೆ. 2013-14ರಲ್ಲಿ ರಾಜ್ಯದ 432 ಕೋಟಿ ರೂ.ಗಳ ಬಜೆಟ್ ಅನ್ನು 2021ರಲ್ಲಿ 2,567ಕ್ಕೆ ಹೆಚ್ಚಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಮೂಲಸೌಕರ್ಯ ಅಭಿವೃದ್ಧಿಗೆ ಏನೂ ಮಾಡಿಲ್ಲ. ನಮ್ಮ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಎಂದು ಹೇಳಿದರು.
ಬಿಜೆಪಿಗೆ ಗೋವಾ ಎಂದರೆ ಗೋಲ್ಡನ್ ಗೋವಾ, ಆದರೆ ಕಾಂಗ್ರೆಸ್ ಗೆ ಗಾಂಧಿ ಕುಟುಂಬ ಗೋವಾ ಎಂದರ್ಥ. ಅವರಿಗೆ ಬೇಕಾಗಿರುವುದು ವಿಹಾರಕ್ಕೆ ಉತ್ತಮ ಸ್ಥಳ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.