Goa Election – ಪರಿಸ್ಥಿತಿ ನನ್ನನ್ನ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮಾಡಿದೆ – ಉತ್ಪಲ್ ಪರಿಕ್ಕರ್
ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಬಿಜೆಪಿಯನ್ನ ತೊರೆದು ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. The situation has made me to contest independently – Utpal Parikkar
ಪರಿಸಸ್ಥಿತ ನನ್ನನ್ನು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದೆ, ಪಣಜಿಯ ಪ್ರತಿಯೊಬ್ಬ ಮತದಾರರನ್ನು ತಲುಪಲು ಪ್ರಯತ್ನಿಸುತ್ತೇನೆ. ಅಭ್ಯರ್ಥಿಯನ್ನ ಆಯ್ಕೆ ಮಾಡುವುದು ಜನರಿಗೆ ಬಿಡುತ್ತೇನೆ. ಎಂದು ಎ ಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಉತ್ಪಲ್ ಪರಿಕ್ಕರ್ ಬಿಜೆಪಿ ಪಕ್ಷದಿಂದ ಟಿಕೆಟ್ ಗೆ ಪ್ರಯತ್ನಿಸಿದ್ದರು ಆದರೆ ಟಿಕೆಟ್ ಸಿಗದ ಕಾರಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ನನಗೆ ಬೇರೆ ಆಯ್ಕೆಯಿಲ್ಲ ನಾನು ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ. ರಾಜಿನಾಮೆ ಔಪಚಾರಿಕವಾಗಿದೆ. ರಾಜಿನಾಮೆ ಯಾವಾಗಲು ನನ್ನ ಹೃದಯದಲ್ಲಿರುತ್ತದೆ. ಇದು ನನಗೆ ಕಷ್ಟದ ಆಯ್ಕೆ ಆದರೆ ಗೋವಾದ ಜನತೆಗಾಗಿ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಈ ಹಿಂದೆ ಹೇಳಿದ್ದರು…