ಪ್ರವಾಸಿಗರ ಹಾಟ್ ಸ್ಪಾಟ್ ಗೋವಾದಲ್ಲಿ ನೆಲಕಚ್ಚಿದ ಪ್ರವಾಸೋದ್ಯಮ..!
ಗೋವಾ : ಪ್ರವಾಸಿಗರ ಹಾಟ್ ಫೇವರೇಟ್ ತಾಣ ಗೋವಾದಲ್ಲಿ ಸದಾ ಜನರೇ ಜನರು ತುಂಬಿರುತ್ತಾರೆ. ವಿದೇಶಿ ದೇಶೀ ಪ್ರವಾಸಿಗರ ಸಾಗರವೇ ಇರುತ್ತೆ. ಆದ್ರೆ ಕೊರೊನಾ ಕಾರಣದಿಂದಾಗಿ ಅಲ್ಲಿನ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನ ಜಾರಿಗೆ ತಂದಿದ್ದು, ಪ್ರವಾಸಿಗರ ಸಂಖ್ಯೆ ತೀರಾ ಇಳಿಕೆಯಾಗಿದ್ದು, ಪ್ರವಾಸೋದ್ಯಮ ದಿಢೀರನೆ ನೆಲಕಚ್ಚಿದೆ. ಪ್ರಮುಖ ಬೀಚ್‌ಗಳಾದ ಕಾಂದೋಳಿ, ಕಲಂಗುಟ್, ಬಾಗಾ, ಶಿಕೇರಿ, ವಾಗಾತೋರ್, ಮೀರಾಮಾರ್ ಬೀಚ್‌ಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.
ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳಿಗೆ ಹೆಚ್ಚಿನ ತೊಂದರೆ ಉಂಟಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯಕ್ಕೆ ದೇಶಿಯ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ರಾಜ್ಯದ ಎಲ್ಲ ಪ್ರಮುಖ ಹೋಟೆಲ್ ರೂಂಗಳು ಅಡ್ವಾನ್ಸ್ ಬುಕ್ ಆಗಿರುತ್ತಿತ್ತು. ಆದರೆ ಇದೀಗ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಿಂದಾಗಿ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.








