ಗೋವಾ ಫಲಿತಾಂಶ – ಕಾಂಗ್ರೇಸ್, ಬಿಜೆಪಿ ಮಧ್ಯೆ ಹಾವು ಏಣಿ ಆಟ ಶುರು….
ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಾವು, ಏಣಿ ಆಟ ಶರುವಾಗಿದೆ. ಆರಂಭದಲ್ಲಿ ಬಿಜೆಪಿ ಮುನ್ನಡೆ, ನಂತರ ಕಾಂಗ್ರೆಸ್ ಮುನ್ನಡೆ ಸಾಧಿಸಿ ಈಗ ಮತ್ತೆ ಬಿಜೆಪಿ ಮುನ್ನಡೆ ಪಡೆದಿದೆ.
ಬೆಳಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ ಬಿಜೆಪಿ 18, ಕಾಂಗ್ರೆಸ್ 13 ರಲ್ಲಿ ಮುನ್ನಡೆ ಸಾಧಿಸಿದೆ. ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದು ಅನುಮಾನ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿತ್ತು.
ಕಳೆದ ಬಾರಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರಕ್ಕೇರುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ, ಈ ಚುನಾವಣೆ ಬರುವ ಹೊತ್ತಿಗೆ ಕೇವಲ ಒಬ್ಬ ಶಾಸಕ ಉಳಿದುಕೊಂಡಿದ್ದರು. ಸ್ಥಳೀಯ ನಾಯಕರು ಇಲ್ಲದೇ ಹೋದರೂ ಈ ಬಾರಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಿಟ್ಟಿಸಲಿದೆ. ಕಾಂಗ್ರೆಸ್ ಸರಿಸಮನಾಗಿ ಬಿಜೆಪಿ ಫೈಟ್ ಕೊಟ್ಟಿದೆ. ಇಲ್ಲಿ ಯಾವುದೇ ಪಕ್ಷ ಗೆದ್ರೂ ಮೂರ್ನಾಲ್ಕು ಸೀಟುಗಳ ಅಂತರ ಅಷ್ಟೇ ಇರಲಿದೆ.. ಎಎಪಿ-ಟಿಎಂಸಿ ಪಕ್ಷಗಳು ಖಾತೆ ತೆರೆಯಲಿವೆ ಎಂಬ ಲೆಕ್ಕಗಳು ಈ ಎಕ್ಸಿಟ್ ಪೋಲ್‍ನಲ್ಲಿ ಸಿಕ್ಕಿತ್ತು.
ಗೋವಾದಲ್ಲಿ ಒಟ್ಟು 40 ಸ್ಥಾನಗಳಿದ್ದು, ಬಹುಮತಕ್ಕೆ 21 ಬೇಕಿದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10 ಸ್ಥಾನ ಪಡೆದಿದ್ದರು.








