ಕರ್ನಾಟಕ ಗೋಹತ್ಯೆ ವಿಧೇಯಕ : ಗೋವಾ ವ್ಯಾಪಾರಿಗಳಿಂದ ವಿರೋಧ
ಗೋವಾ : ಕಳೆದ ವಾರ ವಿಧಾನಸಭೆಯಲ್ಲಿ ಗೋ ಅಕ್ರಮ ಮಾರಾಟ ಮತ್ತು ಗೋ ಹತ್ಯೆ ನಿಷೇಧ ಮಸೂದೆ (2020) ಅನ್ನು ಅಂಗೀಕರಿಸಲಾಗಿದೆ. ಆದರೆ ವಿಧಾನಪರಿಷತ್ ನಲ್ಲಿ ಇನ್ನೂ ಈ ವಿಧೇಯಕ ಅಂಗೀಕಾರವಾಗಿಲ್ಲ.
ಈ ಮಧ್ಯೆ ಈ ತಮ್ಮ ಪ್ರಭಾವ ಬಳಸಿಕೊಂಡು ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬರುವುದನ್ನು ತಡೆಹಿಡಿಯುವಂತೆ ಗೋವಾದ ಜಾನುವಾರು ವ್ಯಾಪಾರಿಗಳು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮೆಜೆಸ್ಟಿಕ್ ಬಳಿ ಹೋಗೋ ಮುನ್ನ ಎಚ್ಚರ : ಬೆಂಗ್ಳೂರಲ್ಲಿ ಮತ್ತೆ ರೈತರ ಘರ್ಜನೆ
ಪತ್ರದಲ್ಲಿ ಏನಿದೆ..?
ಗೋವಾ ಬಹುಸಂಸ್ಕøತಿಯುಳ್ಳ ಕರಾವಳಿ ರಾಜ್ಯ. ಇಲ್ಲಿ ಗೋಮಾಂಸ ಜನರ ಪ್ರಧಾನ ಆಹಾರದ ಒಂದು ಭಾಗವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಅದನ್ನು ಸೇವಿಸುತ್ತಾರೆ. ಕರ್ನಾಟಕದಲ್ಲಿ ಈ ಕಾನೂನು ಜಾರಿಗೆ ಬಂದರೆ ಅದು ನಮ್ಮ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಗೋ ಮಸೂದೆ ವಿಧೇಯಕ ಕುರಿತ ಅಧಿಸೂಚನೆ ಹೊರಬಿದ್ದರೆ, ಕರ್ನಾಟಕ ರಾಜ್ಯದ ರೈತರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಕರ್ನಾಟಕದ ರೈತರು ತಮ್ಮ ವಯಸ್ಸಾದ ಮತ್ತು ಕೃಷಿ ಕಾರ್ಯಕ್ಕೆ ಅನುಪಯುಕ್ತವಾದ ದನಗಳನ್ನು ಮಾರಾಟ ಮಾಡಲು ತೊಂದರೆಯಾಗಲಿದೆ.
ಹೀಗಾಗಿ ಕರ್ನಾಟಕ ಹಾಗೂ ಗೋವಾ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಈ ಗೋ ಅಕ್ರಮ ಮಾರಾಟ ಮತ್ತು ಗೋ ಹತ್ಯೆ ನಿಷೇಧ ಸಮೂದೆ ಅಂಗೀಕಾರವಾಗದಂತೆ ತಡೆಯುವಂತೆ ಕೋರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









