ತಮಿಳುನಾಡಿಗೆ ಅಮಿತ್ ಶಾ : ಟ್ವಿಟ್ಟರ್ ನಲ್ಲಿ #gobackamitshah ಟ್ರೆಂಡಿಂಗ್
ನವದೆಹಲಿ : ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ದ್ರಾವಿಡರ ನೆಲದಲ್ಲಿ ಕಮಲ ಅರಳಿಸುವ ಬಿಜೆಪಿಯ ಹಲವು ವರ್ಷಗಳ ಪ್ರಯತ್ನ ಸಫಲವಾಗಿಲ್ಲ.
ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಒದಗಿಸಲೇಬೇಕೆಂಬ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಂಕಲ್ಪ ತೊಟ್ಟಂತೆ ಕಾಣುತ್ತಿದೆ.
ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ ತಮಿಳುನಾಡಿನಲ್ಲಿ ಭದ್ರ ಅಡಿಪಾಯ ಹಾಕಲು ಅಮಿತ್ ಶಾ ಇಂದು ಭೇಟಿ ನೀಡುತ್ತಿದ್ದಾರೆ. ಆದ್ರೆ ಟ್ವಿಟ್ಟರ್ ನಲ್ಲಿ #gobackamitshah ಫುಲ್ ಟ್ರೆಂಡಿಂಗ್ ಆಗಿದೆ.
ಹೌದು..! ಇಂದು ಸರ್ಕಾರಿ ಕಾರ್ಯಕ್ರಮವೊಂದರ ಉದ್ಘಾಟನೆ ನೆಪದಲ್ಲಿ ಹಲವು ತಿಂಗಳ ನಂತರ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅಮಿತ್ ಶಾ ಭೇಟಿ ಉದ್ದೇಶವೇ ತಮಿಳರ ನಾಡಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳುವ ಪ್ರಯತ್ನದ ಮೊದಲ ಭಾಗ ಎನ್ನಲಾಗಿದೆ.
ಈಗಾಗಲೇ ಹಿರಿಯ ನಟಿ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಜತೆಗೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನ ಮುಂದುವರೆಸಿದ್ದಾರೆ.
ತಮಿಳುನಾಡಲ್ಲಿ ಕಮಲ ಅರಳಿಸುವ ತಂತ್ರ: ಅಮಿತ್ ಶಾ ಇಂದಿನ ಭೇಟಿ ಹಿಂದಿದ್ಯಾ ಮೆಗಾ ಪ್ಲಾನ್..!
ಹೀಗಾಗಿ ತಮಿಳುನಾಡಿನಲ್ಲಿ ಕಮಲ ಅರಳಿಸಲು ಏನೆಲ್ಲಾ ಪ್ಲಾನಿಂಗ್ ಬೇಕೋ ಅದಕ್ಕೆ ಮುನ್ನುಡಿ ಬರೆಯಲು ಅಮಿತ್ ಶಾ ಭೇಟಿಯ ಉದ್ದೇಶವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಈ ಎಲ್ಲದರ ಮಧ್ಯೆ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡುವುದನ್ನು ವಿರೋಧಿಸಿ #gobackamitshah ಹ್ಯಾಷ್ ಟ್ಯಾಗ್ ಅಭಿಯಾನ ಶುರುವಾಗಿದೆ. ಭಿನ್ನ ವಿಭಿನ್ನ ಮಿಮ್ ಗಳ, ಪೋಸ್ಟರ್ ಗಳ ಮೂಲಕ ತಮಿಳಿಗರು ಅಮಿತ್ ಶಾ ಭೇಟಿಯನ್ನು ವಿರೋಧಿಸುತ್ತಿದ್ದಾರೆ.
“ಉತ್ತರ ಭಾರತದಲ್ಲಿ ಭ್ರಾತೃತ್ವವನ್ನು ಹಾಳು ಮಾಡಿರುವ ಫ್ಯಾಸಿಸ್ ಶಕ್ತಿಗಳು ಈಗ ದಕ್ಷಿಣ ತಮಿಳುನಾಡಿನ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಪೆರಿಯರ್ ನಾಡಿನಲ್ಲಿ ಅವರ ಆಟ ನಡೆಯೋದಿಲ್ಲ..”
“ತಮಿಳುನಾಡು ಸಾಮಾಜಿಕ ನ್ಯಾಯ ಮತ್ತು ಧಾರ್ಮಿಕ ಸಾಮರಸ್ಯದ ಭೂಮಿಯಾಗಿದ್ದು, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಅವರ ವಿಭಜಿತ, ದ್ವೇಷ ತತ್ವಗಳ ನೀತಿಗಳಿಗೆ ಸ್ಥಾನವಿಲ್ಲ.
ಡಾ. ಬಿ ಆರ್ ಅಂಬೇಡ್ಕರ್ ಅವರ ಭಾರತದ ಸಂವಿಧಾನವನ್ನು ನಾವು ನಂಬುತ್ತೇವೆ, ಅದನ್ನು ಎಂದಿಗೂ ಹಾಳುಮಾಡಲು ನಾವು ಅನುಮತಿಸುವುದಿಲ್ಲ” #gobackamitshah ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











