ಚಿಕ್ಕೋಡಿ : ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಮತಾಂಧ ಗೋಡ್ಸೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಆರಾಧ್ಯ ದೈವ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.’
ಸಿದ್ದರಾಮಯ್ಯನವರು ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಎನ್ ಎಸ್ ಹರಡೇಕರ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶದಲ್ಲಿ ಮಹಾತ್ಮ ಗಾಂಧೀಜಿ ಮತ್ತು ನಾ.ಸು.ಹರಡೀಕರ್ ಮನುಷ್ಯತ್ವ ಉಳಿಯಬೇಕು. ಗಾಂಧೀಜಿ ವಿಶ್ವ ಮಾನವನಾಗಲು ಪ್ರಯತ್ನ ಮಾಡಿದವರು.
ಗಾಂಧಿ ಜಯಂತಿ ಆಚರಣೆ ಮಾಡುತ್ತೇವೆ ಅಂದ್ರೆ ಮನುಷ್ಯರಾಗಲು ಪ್ರಯತ್ನ ಮಾಡಬೇಕು. ಮತಾಂಧರೇ ಗಾಂಧೀಜಿ ಅವರನ್ನು ಕೊಂದು ಹಾಕಿದರು. ಆರ್ಎಸ್ಎಸ್ ಮತಾಂಧರ ಆರಾಧ್ಯದೈವ.
ಬಿಜೆಪಿಯವರದ್ದು ಜಾತಿ ಒಡೆಯುವುದು, ಕೋಮುವಾದ ಮಾಡುವುದೇ ಕೆಲಸ. ಸಂವಿಧಾನ ಇಂದು ಕೋಮುವಾದಿಗಳ ಕೈಯಲ್ಲಿದೆ ಎಂದು ಗುಡುಗಿದರು.
ಇದನ್ನೂ ಓದಿ : ಯಡಿಯೂರಪ್ಪ ಅಳುಮುಂಜಿಯಂತೆ ಅಳಲ್ಲ : ಹೆಚ್ ಡಿಕೆಗೆ ಪ್ರತಾಪ್ ಸಿಂಹ ಟಾಂಗ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಕೆಡವಿ ಸಂವಿಧಾನ ಸುಟ್ಟು ಹಾಕಬೇಕು ಎಂದವರು ಇಂದು ಬಿಜೆಪಿ ರಾಷ್ಟ್ರೀಯ ಯೂತ್ ನ ಅಧ್ಯಕ್ಷರಾಗಿದ್ದಾರೆ.
ಯಡಿಯೂರಪ್ಪನ ಮೊಮ್ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆದರು ಅವರು ಮಾತ್ರ ರಾಜೀನಾಮೆ ಕೊಡುತ್ತಿಲ್ಲ. ಪ್ರೂವ್ ಮಾಡಿ ರಾಜೀನಾಮೆ ಕೊಡುತ್ತೇನೆ ಅಂತಾರೆ.
ಪ್ರೂವ್ ಮಾಡಲು ತನಿಖೆ ನಡೆಸುವವರು ಯಾರು? ಮೊದಲು ತನಿಖೆಯಾಗಲಿ ಅವರ ಮೇಲಿರುವ ಆರೋಪ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸಿಎಂ ಅವರಿಗೆ ಸವಾಲು ಎಸೆದರು








