ಚಿಕ್ಕೋಡಿ : ಗೋಕಾಕ್ ಪೊಲೀಸರು ಅಮಿತ್ ಶಾ ಅವರನ್ನು ಬಂಧಿಸಬಹುದು. ಆದರೆ, ವೈದ್ಯರನ್ನು ಬ್ಲ್ಯಾಕ್ಮೇಲ್ ಮಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ಮತ್ತು ಸಂಗಡಿಗರನ್ನು ಬಂಧಿಸಲಾಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಗರದಲ್ಲಿ ವೈದ್ಯರಿಗೆ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪೊಲೀಸರಿಗೆ ಭೀಮಶಿ ಭರಮನ್ನವರ ಹಾಗೂ ಸಂಗಡಿಗರನ್ನು ಹಿಡಿಯಲು ಸಾಧ್ಯವಿಲ್ಲ. ಕಾರಣ ಭರಮನ್ನ ಅವರು ಹೇಳಿದಂತೆ ಅಲ್ಲಿನ ಪೊಲೀಸರು ಕೇಳಬೇಕಾಗುತ್ತದೆ. ಅವರು ಅಸಹಾಯಕರಾಗಿದ್ದಾರೆ. ಭೀಮಶಿ ಭರಮನ್ನವರ್ ಗೆ ಇದೇನು ಹೊಸದಲ್ಲ, ಇಂತಹ ನೂರಾರು ಕೇಸ್ ಮಾಡಿದ್ದಾರೆ. ಅವರ ನೂರಾರು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಇವರ ಜೊತೆ ಎತ್ತಿನಮನೆ, ಸುರೇಶ ಸನದಿ, ದುರ್ಗಣ್ಣವರ, ರಿಯಾಜ್ ದೇಸಾಯಿ ಇನ್ನೂ ನಾಲ್ಕು ಜನ ಗೋಕಾಕ್ ನ ರಾಜಕೀಯವನ್ನು ನಿಯಂತ್ರಣ ಮಾಡುತ್ತಾರೆ ಎಂದು ಆರೋಪಿಸಿದರು.
ಮುಂದುವರಿದು ಮಾತನಾಡಿದ ಜಾರಕಿಹೊಳಿ, ಗೋಕಾಕ್ ನಲ್ಲಿ ಇದೇ ಮೊದಲ ಬಾರಿಗೆ ವೈದ್ಯ ಶ್ರೀಶೈಲ ಹೊಸಮನಿ ಧೈರ್ಯ ಮಾಡಿದ್ದು, ಇವರು ಎಸ್ಪಿ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.